Sunday, May 19, 2024
spot_imgspot_img
spot_imgspot_img

ವಾಹನ ಸವಾರರಿಗೆ ಮತ್ತೊಂದು ಖುಷಿಸುದ್ದಿ ನೀಡಿದ ESSAR NAYARA; ಪ್ರತಿ ಲೀ. ಡಿಸೇಲ್‌ ಮೇಲೆ 1ರೂ. ಕಡಿತ..!

- Advertisement -G L Acharya panikkar
- Advertisement -

ವಿಟ್ಲ: ತೈಲ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ESSAR NAYARA ಇತ್ತೀಚಿಗೆ ತನ್ನ ಗ್ರಾಹಕರಿಗೆ ಮಾರುಕಟ್ಟೆ ದರಕ್ಕಿಂತ ಪ್ರತಿ ಲೀ. ಪೆಟ್ರೋಲ್‌ ಮೇಲೆ 1 ರೂ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಸಂತಸದ ಸುದ್ದಿ ತಂದಿತ್ತು. ಈಗ ಸಂತಸ ಇಮ್ಮಡಿಗೊಳಿಸುವ ಸುದ್ದಿಯೊಂದಿದೆ. ಮಾರುಕಟ್ಟೆ ದರಕ್ಕಿಂತ ಪ್ರತಿ ಲೀ. ಡಿಸೇಲ್ ಮೇಲೆ 1 ರೂ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ವಿಟ್ಲದ ಉರಿಮಜಲು ಹಾಗೂ ಕುದ್ದುಪದವುನಲ್ಲಿ ಕಾರ್ಯಾಚರಿಸುತ್ತಿರುವ ESSAR NAYARA ಪೆಟ್ರೋಲ್‌ ಬಂಕ್‌ನಲ್ಲಿ ಮಾರುಕಟ್ಟೆ ದರಕ್ಕಿಂತ ಪ್ರತಿ ಲೀ. ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲೆ 1 ರೂ ಕಡಿಮೆ ದರದಲ್ಲಿ ಮಾರಾಟವಾಗುತ್ತಿದೆ. ಇದೇ ರೀತಿ ESSAR NAYARA ಶಾಖೆಗಳಾದ ಪುತ್ತೂರಿನ ಮುಕ್ವೆ , ಈಶ್ವರಮಂಗಿಲದ ಗಾಳಿಮುಖ, ಕಲ್ಲಡ್ಕ , ಬೆಳ್ಳಾರೆ, ಆರಂತೋಡು ಪೆಟ್ರೋಲ್‌ ಬಂಕ್‌ನಲ್ಲಿಯೂ 1ರೂ. ಕಡಿಮೆ ದರದಲ್ಲಿ ಪೆಟ್ರೋಲ್‌, ಸಿಸೇಲ್‌ ಮಾರಾಟವಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!