


ಪೆರಾಜೆ: ಬಂಟ್ವಾಳ ತಾಲೂಕಿನ ಗಡಿಯಾರ ಬಳಿಯ ಸ್ವಾಗತ ನಗರ ಎಂಬಲ್ಲಿ ಪೆರಾಜೆ ಗ್ರಾಮಕ್ಕೆ ಸಂಬಂಧಿಸಿದ 20 ಎಕರೆ ಹಾಗೂ ಕೆದಿಲ ಗ್ರಾಮಕ್ಕೆ ಸಂಬಂಧಿಸಿದ 14.46 ಎಕರೆ ಗೋಮಾಳ ಇರುತ್ತದೆ. ಇದರಲ್ಲಿ ಕಾನೂನು ಬಾಹಿರವಾಗಿ ದಿನದಿಂದ ದಿನಕ್ಕೆ ಅಕ್ರಮ ಮನೆಗಳು ನಿರ್ಮಾಣವಾಗುತ್ತಿರುವ ಬಗ್ಗೆ ಬೆಳಕಿಗೆ ಬಂದಿರುತ್ತದೆ. ಇದರ ವಿರುದ್ಧ ಹಿಂದು ಜಾಗರಣ ವೇದಿಕೆಯು 2012 ನೇ ಇಸವಿಯಿಂದ ಕಾನೂನು ಬದ್ಧ ಹೋರಾಟ ಮಾಡುತ್ತಾ ಬಂದರೂ ಅಧಿಕಾರಿಗಳ ನಿರ್ಲಕ್ಷದಿಂದ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಡೆದಿರುವುದಿಲ್ಲ.2023 ರಲ್ಲಿ ಮತ್ತೆ ಅದೇ ಜಾಗದಲ್ಲಿ ಅಕ್ರಮ ಬೂ ಕಬಳಿಕೆ, ಮನೆ ನಿರ್ಮಾಣ ನಡೆಯತೊಡಗಿತು.ಪೆರಾಜೆ ಗ್ರಾಮದ ಗೋಮಾಳ ಸ.ನಂ164/1B ರಲ್ಲಿ ಪೆರಾಜೆ ಗ್ರಾಮದ ಜೋಗಿಬೆಟ್ಟು ನಿವಾಸಿ ರಿಯಾಜ್ ಎಂಬವರು ಅಕ್ರಮವಾಗಿ 4 ಸಿಮೆಂಟ್ ಕಂಬಗಳನ್ನು ಹಾಕಿ ಶೆಡ್ ನಿರ್ಮಾಣ ಮಾಡಿದ್ದರು,ತಕ್ಷಣ ತಹಶಿಲ್ದಾರ ಗಮನಕ್ಕೆ ತರಲಾಯ್ತು.ಆದರೂ ಕಾನೂನು ಕ್ರಮ ಸಿಕ್ಕಿರಲಿಲ್ಲ. ಕೆಲವೇ ದಿನಗಳಲ್ಲಿ ,ತೆಂಗಿನ ಗಿಡ, ಬಾಳೆಗಿಡಗಳನ್ನು ನೆಟ್ಟು, ಹಳೆಯ ಕಲ್ಲುಗಳನ್ನು ತಂದು ಗೋಡೆ ಕಟ್ಟಲು ಪ್ರಯತ್ನಿಸಿದಾಗ ಕಂದಾಯ ನಿರೀಕ್ಷಕರು ಬಂದು ತಕ್ಷಣ ಕೆಲಸವನ್ನು ನಿಲ್ಲಿಸಲು ಸೂಚಿಸಿದ್ದರು.ಆದರೂ ಕೆಲಸ ರಾತ್ರೆಯ ಹೊತ್ತಿನಲ್ಲಿ ಕಣ್ಣುತಪ್ಪಿಸಿ ನಡೆಯುತ್ತಲೇ ಇತ್ತು.ತಕ್ಷಣ ಕೆದಿಲ ಹಾಗು ಪೆರಾಜೆ ಗ್ರಾಮದ ಗೋ ಪ್ರೇಮಿಗಳು ರೈತರು, ಒಂದಾಗಿ ಸ್ವಾಗತ ನಗರ ಗೋ ಮಾಳ ಸಂರಕ್ಷಣಾ ಸಮಿತಿ ಯನ್ನು ರಚಿಸಿ, ಅದರ ಮೂಲಕ ಹೋರಾಟವನ್ನು ಕೈಗೆತ್ತಿಕೊಳ್ಳಲಾಯ್ತು. ಬಂಟ್ವಾಳ ತಹಶಿಲ್ದಾರರ ಕಛೇರಿಯ ಮುಂಬಾಗ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿ ಪ್ರತಿಭಟನೆಯೂ ನಡೆಯಿತು. ಇದರ ಪರಿಣಾಮ ತಹಶಿಲ್ದಾರರು ತಕ್ಷಣ ಕನೂನು ಕ್ರಮ ತೆಗೆದುಕೊಂಡು 2023 ರ ಅಕ್ಟೋಬರ್ ತಿಂಗಳಿನಲ್ಲಿ ಕಂದಾಯ ನಿರೀಕ್ಷರು ಅವರಿಗೆ ತಕ್ಷಣ ಈ ಕಟ್ಟಡವನ್ನು ತೆರವು ಗೊಳಿಸುವಂತೆ ನಡವಳಿ ಕಳುಹಿಸಿದ್ದರೂ .ಕಂದಾಯ ನಿರೀಕ್ಷರು ರಾಜಕೀಯ ಪ್ರೇರಿತ ಶಕ್ತಿಗಳಿಗೆ ತಲೆ ಬಾಗಿ ,ತಹಶಿಲ್ದಾರರ ಮಾತಿಗೆ ಮನ್ನಣೆ ನೀಡದೆ ಮನೆ ತೆರವು ಗೊಳಿಸದೆ ಬಿಟ್ಟಿದ್ದರು.2025 ರ ಎಪ್ರಿಲ್ ತಿಂಗಳ ಪ್ರಾರಂಭದಲ್ಲಿ ರಾತ್ರೋರಾತ್ರೆ ಮತ್ತೆ ಆ ಮನೆಯ ಕಾರ್ಯ ಚಟುವಟಿಕೆ ಪ್ರಾರಂಭವಾಯಿತು.ದೊಡ್ಡದಾಗಿ ಮನೆ ಬೆಳೆಯುತ್ತಿರುವುದನ್ನು ಗಮನಿಸಿದ ಗೋಮಾಳ ಹಿತರಕ್ಷಣಾ ಸಮಿತಿ ತಕ್ಷಣ ತಹಶಿಲ್ದಾರ್ ಹಾಗು ಕಂದಾಯ ನಿರೀಕ್ಷರಿಗೆ ದೂರು ನೀಡಿದ್ದರು. ದೂರಿಗೆ ಸ್ಪಂದಿಸಿಬಂಟ್ವಾಳ ತಹಶಿಲ್ದಾರ್ ಅವರು ಸ್ಥಳಕ್ಕೆ RI,VA,PDO ಅವರನ್ನು ಕಳುಹಿಸಲಾಗಿತ್ತು. ಕಂದಾಯ ನಿರೀಕ್ಷರು ಕೆಲವೇ ದಿನಗಳ ಒಳಗಾಗಿ ಈ ಅಕ್ರಮ ಕಟ್ಟಡ ತೆರವು ಮಾಡುವುದಾಗಿ ತಿಳಿಸಿದ್ದಾರೆ.ದೂರುದಾರರಾದ ಗೋಮಾಳ ಹಿತರಕ್ಷಣಾ ಸಮಿತಿಯ ಮುಖಂಡ ಬ.ಗಣರಾಜ ಭಟ್ ಕೆದಿಲ ಸ್ಥಳಕ್ಕಾಗಮಿಸಿ ಅಕ್ರಮ ಕಟ್ಟಡ ನಿರ್ಮಾಣದ ಪ್ರತೀ ಹಂತದ ದಾಖಲೆಗಳು,ಕಾನೂ ಬದ್ದ ಹೋರಾಟದ ದಾಖಲೆ, ಅಧಿಕಾರಿಗಳ ಅದೇಶ ಪ್ರತಿಗಳನ್ನು ಕಂದಾಯ ನಿರೀಕ್ಷರಿಗೆ ತೋರಿಸಿದ್ದಾರೆ.
ಈ ಬಗ್ಗೆ ರಾಜಕಾರಣಿಗಳ ಗೊಡ್ಡು ಬೆದರಿಕೆಯ ಪೋನು ಕರೆಗಳಿಗೆ ಕಿವಿಗೊಡದೆ ಕಾನೂನು ಪ್ರಕಾರವಾಗಿ ,ಸತ್ಯ,ಧರ್ಮದ ಪ್ರಕಾರ ಕೆಲಸ ಮಾಡಿ, ಗೋಮಾಳದಲ್ಲಿ ಕಟ್ಟಲ್ಪಟ್ಟ ಎಲ್ಲಾ ಅಕ್ರಮ ಕಟ್ಟಡ ತೆರವು ಮಾಡಿ, ಎಂದು ಗಣರಾಜ ಭಟ್ ಕೆದಿಲ ಕಿಡಿಕಾರಿದ್ದಾರೆ.ಹಿಂ.ಜಾ.ವೆ ಮಖಂಡ ಅಕ್ಷಯ್ ರಜಪೂತ್ ಕಲ್ಲಡ್ಕ, ಅಕ್ರಮ ಕಟ್ಟಡ ತೆರವು ಗೊಳಿಸುತ್ತೇವೆಂದು ಹೇಳಿ ನಮ್ಮನ್ನು ಮೋಸ ಗೊಳಿಸಿದ್ದು ಸಾಕು ,ಯಾವಾಗ ತೆರವು ಗೊಳಿಸುತ್ತೀರೆಂದು ದಿನಾಂಕ ನಿಗದಿ ಪಡಿಸಿ ನಂತರ ತೆರಳಿ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಗೋಮಾಳ ಹಿತರಕ್ಷಾಣಾ ಸಮಿತಿಯ ಹೋರಾಟ ಪ್ರಮುಖ ರೂಪೇಶ್ ಪೂಜಾರಿ ಪೆರಾಜೆ, ಮುಖಂಡರಾದ ವಿಶ್ವನಾಥ ಕೆದಿಲ,ಶಿವರಾಮ ಕುಲಾಲ್ ಕೆದಿಲ,ಲಿತೀಶ ಕುಲಾಲ್ ಪೆರಾಜೆ,ಮಹೇಂದ್ರ ಪೆರಾಜೆ, ಮೊದಲಾದ ಮುಖಂಡರು ಉಪಸ್ಥಿತರಿದ್ದರು.