- Advertisement -
- Advertisement -






ಪೆರ್ಡೂರು: ಗೆಳೆಯರ ಬಳಗ (ರಿ) ಪೆರ್ಡೂರು ಸಂಸ್ಥೆಯ ವತಿಯಿಂದ ಮಳೆಗಾಲದ ಯೋಜನೆ ಅಂಗವಾಗಿ ಬಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ಡೂರು ಇಲ್ಲಿನ ವಿದ್ಯಾರ್ಥಿಗಳಿಗೆ ಸತತ ಎರಡನೇ ವರ್ಷ ಅಂದಾಜು 25,000 ರೂಪಾಯಿ ವೆಚ್ಚದಲ್ಲಿ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಚೇತನ ಶೆಟ್ಟಿ, ಸದಸ್ಯ ತುಕಾರಾಮ್ ನಾಯಕ್, ಗೆಳೆಯರ ಬಳಗ (ರಿ)ಪೆರ್ಡೂರು ಸಂಸ್ಥೆ ಅಧ್ಯಕ್ಷ ನಿತಿನ್ ಮೆಂಡನ್, ಸ್ಥಾಪಕ ಅಧ್ಯಕ್ಷ ಸತೀಶ್ ಪಿ, ಗೌರವ ಅಧ್ಯಕ್ಷ ಸತೀಶ್ ಅಣ್ಣು ಮತ್ತು ಸರ್ವ ಸದಸ್ಯರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾಂತ, ಮುಖ್ಯ ಶಿಕ್ಷಕಿಯರಾದ ಶ್ರೀಮತಿ ವಿಜಯ, ಶ್ರೀಮತಿ ವಿನೋದ ಉಪಸ್ಥಿತರಿದ್ದರು.

- Advertisement -