- Advertisement -
- Advertisement -
ನೆಲ್ಯಾಡಿ :-ಇಲ್ಲಿನ ಪೆರಿಯಶಾಂತಿ ಸಮೀಪದ ಕೌಕ್ರಾಡಿ ಗ್ರಾಮ ವ್ಯಾಪ್ತಿಯ ಪೆರಿಯಶಾಂತಿ, ಮಣ್ಣಗುಂಡಿ ಪರಿಸರದಲ್ಲಿ ಹಲವು ಸಮಯಗಳಿಂದ ಕಾಡಾನೆಯೊಂದು ಸಂಚರಿಸುತ್ತಿದ್ದು,ಕೃಷಿ ನಾಶಪಡಿಸುವುದು ಬಿಟ್ಟರೆ ಜನರಿಗೆ ಈ ತನಕ ಯಾವುದೇ ತೊಂದರೆ ನೀಡಿಲ್ಲ.ಆದರೂ ಸ್ಥಳೀಯ ಜನರಲ್ಲಿ ಭೀತಿ ಆವರಿಸಿದೆ.
ಆಹಾರ ಹುಡುಕಿ ಕಾಡಿನಿಂದ ನಾಡಿಗೆ ಬಂದ ಗಜಪಡೆ.
Posted by Vtv Vitla on Sunday, 19 July 2020
ಈ ಪರಿಸರದಲ್ಲಿ ರಾತ್ರಿ ವೇಳೆ ಕೃಷಿಕರ ತೋಟಕ್ಕೆ ನುಗ್ಗಿ ಪುಂಡಾಟ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಗೊಳಿಸುತ್ತಿದ್ದು,ಇಷ್ಟರವರೇಗೆ ಅರಣ್ಯ ಸಮೀಪದ ತೋಟಗಳಿಗೆ ದಾಳಿ ಮಾಡಿ ಕೃಷಿಗಳನ್ನು ತಿನ್ನುವುದು ನಾಶಪಡಿಸುತ್ತಿದ್ದ ಈ ಆನೆ ತನ್ನ ವ್ಯಾಪ್ತಿಯನ್ನು ಇನ್ನೂ ಗ್ರಾಮೀಣ ಪ್ರದೇಶಕ್ಕೆ ಮುಂದುವರೆಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಶನಿವಾರ ರಾತ್ರಿ ಪೆರಿಯಶಾಂತಿ ಸಮೀಪದ ಮಣ್ಣಗುಂಡಿಯ ಸೇಸಪ್ಪ, ತೋಮಸ್, ಹಮೀದ್, ಇಬ್ರಾಹಿಂ, ನಾರಾಯಣ ಎಂಬವರ ತೋಟಕ್ಕೆ ನುಗ್ಗಿ ಬಾಳೆಗಿಡಗಳು, ತೆಂಗಿನ ಮರವನ್ನು ಕೆಡವಿ ಹಾನಿಗೊಳಿಸಿದೆ.
- Advertisement -