- Advertisement -
- Advertisement -



ಪೆರುವಾಯಿ: ಅಲ್ ಅಮೀನ್ ಪೆರುವಾಯಿ – ಯುಎಇ ಸಮಿತಿ ಆಶ್ರಯದಲ್ಲಿ ಮುಚ್ಚಿರಪದವು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.

ಹಾಜಿ ಇಬ್ರಾಹಿಂ ಪಿ.ಎಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಫಿ ಮುಚ್ಚಿರಪದವು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಹಮೀದ್ ದರ್ಕಷ್, ಹನೀಫ್ ಬಾಂದ್ರಾ, ಆಸಿಫ್ ಮುಚ್ಚಿರಪದವು ಮತ್ತು ಶಾಕಿರ್ ಮುಚಿರಪದವು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳ ವಿದ್ಯಾಭ್ಯಾಸದ ಮಹತ್ವದ ಬಗ್ಗೆ ಉತ್ತೇಜನದ ಮಾತುಗಳನ್ನು ಹೇಳಿದರು.

ಸಿದ್ದಿಕ್ ಕಾನಾ ಸ್ವಾಗತಿಸಿ, ಶಾಲಾ ಶಿಕ್ಷಕಿ ಕುಮಾರಿ ಫಾತಿಮಾ ಮುಫೀದ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Advertisement -