ವಿಟ್ಲ: ಪೆರುವಾಯಿ ಬಾರ್ ಕಳ್ಳತನಕ್ಕೆ ಸಂಬಂಧಿಸಿದಂತೆ ಎಸ್ ಐ ರಾಜೇಶ್ ಕೆವಿ ನೇತೃತ್ವದ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಮಾಣಿಲ ನಿವಾಸಿ ವಿಜಯಕುಮಾರ್ ಕ್ರಾಸ್ತ(4೦), ಗಣೇಶ್ ನಾಯ್ಕ(34), ಪೆರುವಾಯಿ ನಿವಾಸಿ ಸುರೇಶ್ ನಾಯ್ಕ (32) ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 7ರಂದು ರಾತ್ರಿಯಿಂದ ೮ ರ ಬೆಳಗ್ಗೆ ನಡುವೆ ಬಾರ್ ನ ಹಿಂಬದಿಯ ಬಾಗಿಲು ಹಾಗೂ ಬೀಗವನ್ನು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 5೦ ಸಾವಿರ ಮೌಲ್ಯದ ಮದ್ಯವನ್ನು ಕಳವುಗೈದಿದ್ದರು.




ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ, ತನಿಖೆಯನ್ನು ಕೈಗೊಂಡ ಸಂದರ್ಭದಲ್ಲಿ ಆರೋಪಿಗಳ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದ ವಸ್ತುಗಳನ್ನು ಆರೋಪಿಗಳಿಂದ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ವೆಲೆಂಟನ್ ಡಿಸೋಜ್, ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ನಿರ್ದೇನದಂತೆ ಎಸ್. ಐ. ರಾಜೇಶ್ ಕೆವಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲೊಕೇಶ್, ಶ್ರೀಧರ್, ಪ್ರತಾಪ, ವಿನಾಯಕ, ಅನುಕುಮಾರ್ ಮತ್ತಿತರು ಭಾಗವಹಿಸಿದ್ದರು.

