ನವದೆಹಲಿ: ಕೊರೊನಾ ರೋಗ ವಕ್ಕರಿಸಿಕೊಂಡ ಬಳಿಕ ದೇಶದೆಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈಗಾಗಲೇ ಅನೇಕ ಕಂಪೆನಿಗಳು ಬಾಗಿಲು ಮುಚ್ಚುವ ಸ್ಥಿತಿಗೆ ಬಂದು ತಲುಪಿವೆ. ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನೂ ಕೆಲ ಮಂದಿ ಅರ್ಧ ಸಂಬಳ ಪಡೆಯುತ್ತಿದ್ದಾರೆ. ಹೀಗಾಗಿ ಅನೇಕ ಕಾರ್ಮಿಕರು ಭವಿಷ್ಯಕ್ಕಾಗಿ ಕೂಡಿಟ್ಟಿದ್ದ ತಮ್ಮ ಪಿಎಫ್ ಖಾತೆಯಿಂದ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ.
80 ಲಕ್ಷ ನೌಕರರಿಂದ 30 ಸಾವಿರ ಕೋಟಿ ರೂ.ವಾಪಸ್
ದೇಶದಲ್ಲಿ ಸುಮಾರು 6 ಕೋಟಿ ಮಂದಿಗೆ ಪಿಎಫ್ ಖಾತೆಯಿದೆ. ಅದರಲ್ಲಿ ಎಪ್ರೀಲ್ ನಿಂದ ಜುಲೈವರೆಗೂ ಸುಮಾರು 80 ಲಕ್ಷ ಉದ್ಯೋಗಿಗಳು ತಾವು ಕೂಡಿಟ್ಟಿದ್ದ ಹಣವನ್ನು ಪಾಪಸ್ ಪಡೆದುಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಇಲ್ಲಿಯವರೆಗೆ ಪಿಎಫ್ ಖಾತೆಗಳಿಂದ 30 ಸಾವಿರ ಕೋಟಿ ಹಣವನ್ನು ವಾಪಸ್ ಪಡೆಯಲಾಗಿದೆ.
ಇದರಲ್ಲಿ ಕೊರೊನಾ ಕಾರಣ ನೀಡಿ 30 ಲಕ್ಷ ಉದ್ಯೋಗಿಗಳು 8,000 ಕೋಟಿ ರೂ.ಹಣವನ್ನು ವಾಪಸ್ ಪಡೆದುಕೊಂಡಿದ್ರೆ, ವೈದ್ಯಕೀಯ ಕಾರಣ ನೀಡಿ ಸುಮಾರು 50 ಲಕ್ಷ ಸಿಬ್ಬಂದಿ 22 ಸಾವಿರ ಕೋಟಿ ಹಣವನ್ನು ಹಿಂಪಡೆದಿದ್ದಾರೆ.