Saturday, June 20, 2026
spot_imgspot_img
spot_imgspot_img

ಪಿಜಿ ಸಿಇಟಿ-2026 ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

- Advertisement -
- Advertisement -

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2026-27ನೆ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ಪಿಜಿ ಸಿಇಟಿ-2026 ಪರೀಕ್ಷೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾ.23ರಿಂದ ಎ.8ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಶುಲ್ಕ ಪಾವತಿಗೆ ಎ.10 ಕೊನೆ ದಿನವಾಗಿದೆ.ರವಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿದ್ದು, ಎಂಇ, ಎಂಟೆಕ್ ಪ್ರವೇಶ ಪರೀಕ್ಷೆಯನ್ನು ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವಿಷಯಗಳಿಗೆ ಮಾತ್ರ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.ಬಯೋ ಟೆಕ್ನಲಾಜಿ, ಕೆಮಿಕಲ್ ಇಂಜಿನಿಯರಿಂಗ್, ಎನ್ವಿರಾನ್‌ಮೆಂಟ್ ಇಂಜಿನಿಯರಿಂಗ್, ಪಾಲಿಮರ್ ಸೈನ್ಸ್ ಮತ್ತು ಟೆಕ್‌ಟ್‌ಟೈಲ್ ಟೆಕ್ನಾಲಾಜಿಗೆ ಪರೀಕ್ಷೆಯನ್ನು ನಡೆಸುವುದಿಲ್ಲ.

ಈ ವಿಷಯಗಳಿಗೆ ಪ್ರವೇಶಾತಿಯನ್ನು ಆಯಾ ಪದವಿ ಪರೀಕ್ಷೆಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೀಡಲಾಗುತ್ತದೆ. ಅಭ್ಯರ್ಥಿಗಳ ಮಾಹಿತಿಗಾಗಿ ಪರೀಕ್ಷೆ ನಡೆಸುವ ವಿಷಯಗಳ ಪಠ್ಯಕ್ರಮವನ್ನು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಂ.ಆರ್ಕಿಟೆಕ್ಚ‌ರ್ ಕೋರ್ಸುಗಳ ಪ್ರವೇಶಾತಿಗೆ ಅಭ್ಯರ್ಥಿಗಳು ಕೌನ್ಸಿಲ್‌ ಆಫ್ ಆಕಿಟೆಕ್ಟರ್, ನವದೆಹಲಿ ರವರು ನಡೆಸುವ ಪಿಜಿಇಟಿಎ-2026 ರಲ್ಲಿ ಅರ್ಹತೆ ಪಡೆದಿರಬೇಕು. ಆದರೆ ಅಭ್ಯರ್ಥಿಗಳು ಕರ್ನಾಟಕದ ಪಿಜಿಸಿಇಟಿ-2026ಕ್ಕೆ ಆನ್‌ಲೈನ್ ಮೂಲಕ ನೊಂದಾಯಿಸಿ ಕೊಂಡು, ಆನ್‌ಲೈನ್‌ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಇಂಜಿನಿಯರಿಂಗ್ ಹಾಗು ಟೆಕ್ನಾಲಜಿ ವಿಭಾಗದಲ್ಲಿ ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು ಎಂಇ / ಎಂ.ಟೆಕ್ / ಎಂ. ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2026ಕ್ಕೆ ಹಾಜರಾಗಬೇಕಾಗಿರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು |NEW ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಆರಾಗಬಹುದು ಎಂದು ಎಚ್.ಪ್ರಸನ್ನ ಹೇಳಿದ್ದಾರೆ.

- Advertisement -

Related news

error: Content is protected !!