ಮಹಾರಾಷ್ಟ್ರ: ತೌಕ್ತೆ ಚಂಡಮಾರುತದ ಅಬ್ಬರ ಭಾರತದಲ್ಲಿ ಜೋರಾಗಿತ್ತು. ಈ ಚಂಡಮಾರುತದಿಂದ ಆದ ಅವಘಡಗಳು ಒಂದೆರಡಲ್ಲ. ಚಂಡಮಾರುತದ ಅಬ್ಬರಕ್ಕೆ ದೇಶದ ಹಲವು ಕಡೆಗಳಲ್ಲಿ ಭಾರೀ ಮಳೆಯಾಗಿದೆ. ಅನೇಕರು ಮೃತಪಟ್ಟಿದ್ದಾರೆ ಕೂಡ. ಮಹಾರಾಷ್ಟ್ರದಲ್ಲೂ ಈ ಚಂಡಮಾರುತದ ಅಬ್ಬರ ಜೋರಾಗಿಯೇ ಇತ್ತು.

ಈ ವೇಳೆ, ಹಿಂದಿ ಕಿರುತೆರೆ ನಟಿ ದೀಪಿಕಾ ಸಿಂಗ್ ಡ್ಯಾನ್ಸ್ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮರಗಳು ಮುರಿದು ಬಿದ್ದಿದ್ದು, ದೀಪಿಕಾ ಸಿಂಗ್ ಮನೆಯ ಸಮೀಪವೂ ಮರವೊಂದು ಮುರಿದು ಬಿದ್ದಿತ್ತು. ಈ ವೇಳೆ ಅವರು ಅಲ್ಲಿಗೆ ತೆರಳಿ ಡ್ಯಾನ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿದ್ದ ಮರದ ಎದುರು ನಿಂತು ಫೋಟೋಶೂಟ್ ಮಾಡಿಸಿ ಸಂಭ್ರಮಿಸಿದ್ದಾರೆ.

ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಥ್ರಿಲ್ ಆಗಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಫಿದಾ ಆಗುತ್ತಾರೆ ಎಂಬುದು ದೀಪಿಕಾ ಅವರ ಆಲೋಚನೆ ಆಗಿತ್ತೇನೋ. ಆದರೆ, ಅಲ್ಲಿ ಆಗಿದ್ದೇ ಬೇರೆ. ನಟಿಗೆ ಎಲ್ಲರೂ ಬಾಯಿಗೆ ಬಂದಂತೆ ಬೈದಿದ್ದಾರೆ.

ಕೊವಿಡ್ ಎರಡನೇ ಅಲೆ ಜೋರಾಗಿದೆ. ಇದರ ಜತೆಗೆ ತೌಕ್ತೆ ಚಂಡಮಾರುತದ ಎಫೆಕ್ಟ್ ಜೋರಾಗಿದೆ. ಹೀಗಿರುವಾಗ ಬಿದ್ದ ಮರವನ್ನು ಹಿಡಿದುಕೊಂಡು ಪೋಸ್ ನೀಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

