Friday, April 26, 2024
spot_imgspot_img
spot_imgspot_img

*ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ* *ಮಾಜಿ ಪಂಚಾಯಿತಿ ಸದಸ್ಯ,ಕಾಂಗ್ರೆಸ್ ಕಾರ್ಯಕರ್ತ ಪ್ರದೀಪ್ ಶೆಟ್ಟಿಯ ಹೆಡೆಮುರಿ ಕಟ್ಟಿದ ಹಿರಿಯಡ್ಕ ಪೋಲೀಸರು*.

- Advertisement -G L Acharya panikkar
- Advertisement -

ದಲಿತ ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿ ಅ.12ರಂದು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಬಂಧಿತ ಆರೋಪಿಯನ್ನು ಬೈರಂಪಳ್ಳಿಯ ಪ್ರದೀಪ್ ಶೆಟ್ಟಿ(39) ಎಂದು ಗುರುತಿಸಲಾಗಿದೆ. ಈತ ಆ. 24ರಂದು ಮಧ್ಯಾಹ್ನ ವೇಳೆ ಮನೆಯಲ್ಲಿದ್ದ 13 ವರ್ಷ ಪ್ರಾಯದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾನೆ.

ಈತ ಬಾಲಕಿಯ ಮನೆಯ ಸಮೀಪ ಕೆಲಸ ನಿರ್ವಹಿಸುತ್ತಿದ್ದು, ಇದೇ ವೇಳೆ ಈ ಕೃತ್ಯ ಎಸಗಿದ್ದನು ಎಂದು ಮನೆಯವರು ದೂರು ನೀಡಿದ್ದಾರೆ. ಅದರಂತೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರೋಪಿ ಬಂಧನಕ್ಕಾಗಿ ದಲಿತ ಸಂಘಟನೆ ಸದಸ್ಯರು ಪೊಲೀಸರನ್ನು ಒತ್ತಾಯಿಸಿದ್ದರು.

ಅರೋಪಿ ಮಂಗಳೂರಿನಲ್ಲಿ ಇರುವ ಮಾಹಿತಿ ತಿಳಿದ ಪೊಲೀಸರು ಪ್ರದೀಪ್ ಶೆಟ್ಟಿಯನ್ನು ಬಂಧಿಸಿದ್ದಾರೆ. ಈ ಹಿಂದೆಯೂ ಈತ ಇಂತಹ ಮೂರು ಕೃತ್ಯವನ್ನು ಮಾಡಿದ್ದ ಎಂಬ ಮಾಹಿತಿ ಇದೆ.ಆದರೆ ತನ್ನ ರಾಜಕೀಯ ಪ್ರಭಾವವನ್ನು ಬಳಸಿ ಇದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದ.

- Advertisement -

Related news

error: Content is protected !!