Saturday, May 4, 2024
spot_imgspot_img
spot_imgspot_img

ಕೋಳಿ ತುಂಬಿದ ಪಿಕ್‌ಅಪ್ ಅಪಘಾತ, ನೆರವು ನೀಡುವ ಬದಲು ಚಿಕನ್ ಹೊತ್ತೊಯ್ದ ಜನ!

- Advertisement -G L Acharya panikkar
- Advertisement -

ಕೋಳಿ ಸಾಗಿಸುತ್ತಿದ್ದ ಪಿಕ್‌ಅಪ್ ವಾಹನ ಅಪಘಾತಕ್ಕೀಡಾಗಿ ಇಬ್ಬರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಆಗ್ರಾದ ಬಳಿ ನಡೆದಿದೆ.

ಅಪಘಾತ ಸಂಭವಿಸಿದ ವೇಳೆ ಸ್ಥಳದಲ್ಲಿದ್ದ ಜನರು ಹಾಗೂ ವಾಹನ ಸವಾರರು ಪಿಕ್‌ಅಪ್ ಚಾಲಕ ಹಾಗೂ ಇತರ ಸವಾರರಿಗೆ ಅನುಕೂಲವಾಗುವಂತೆ ನೆರವು ನೀಡುವ ಬದಲು ಪಿಕ್‌ ಅಪ್‌ಲ್ಲಿದ್ದ ಕೋಳಿಗಳನ್ನೇ ಹೊತ್ತೊಯ್ದ ಘಟನೆ ನಡೆದಿದೆ.

ಯಮುನಾ ಎಕ್ಸ್‌ಪ್ರೆಸ್ ವೇ ಮೂಲಕ ಆಗ್ರಾದಿಂದ ನೋಯ್ದಾಗೆ ಕೋಳಿಗಳನ್ನು ತುಂಬಿದ ಪಿಕ್ ಅಪ್ ಸಂಚರಿಸುತ್ತಿತ್ತು. ಬೆಳಗ್ಗೆ 8 ಗಂಟೆ ಹೊತ್ತಿಗೆ ಈ ಅಪಘಾತ ಸಂಭವಿಸಿದೆ. ದೆಹಲಿ, ಹರ್ಯಾಣ, ಉತ್ತರ ಪ್ರದೇಶ ಸೇರಿದಂತೆ ಬಹುತೇಕ ರಾಜ್ಯದಲ್ಲಿನ ಮಂಜು ಕವಿದ ವಾತಾವರಣದಿಂದ ಪ್ರತಿ ದಿನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೆವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ದಯಂತಪುರ ಬಳಿ ಸಂಚರಿಸುತ್ತಿದ್ದ ವೇಳೆ ಪಿಕ್ಅಪ್ ಅಪಘಾತಕ್ಕೀಡಾಗಿದೆ.

ಈ ಅಪಘಾತದಿಂದ ಪಿಕ್ಅಪ್ ಚಾಲಕ ಹಾಗೂ ಸಹ ಚಾಲಕನಿಗೆ ಗಾಯವಾಗಿದೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಕಾರಣ ಟ್ರಾಫಿಕ್ ಜಾಮ್ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಕೆಲ ಸವಾರರು ವಾಹನವನ್ನು ಬದಿಗೆ ತಳ್ಳಿ ಇತರ ವಾಹನದ ಸಂಚಾರಕ್ಕೆ ಅನುವು ಮಾಡಿದ್ದಾರೆ.
ಆದರೆ ಕೋಳಿ ಲಾರಿ ಅಪಘಾತಕ್ಕೀಡಾಗಿದೆ ಅನ್ನೋ ಸುದ್ದಿ ತಿಳಿದ ಅಕ್ಕ ಪಕ್ಕದ ಸ್ಥಳೀಯರು ಆಟೋ ರಿಕ್ಷಾ ಮೂಲಕ ಆಗಮಿಸಿ ಕೋಳಿಗಳನ್ನು ಹೊತ್ತೊಯ್ದಿದ್ದಾರೆ. 30 ನಿಮಿಷದಲ್ಲಿ ಪಿಕ್‌ ಅಪ್‌ನಲ್ಲಿ ಕೋಳಿಗಳನ್ನು ಜನ ಖಾಲಿ ಮಾಡಿದ್ದಾರೆ. ಇತ್ತ ಗಾಯಗೊಂಡ ಚಾಲಕ ಹಾಗೂ ಸಹ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ.

- Advertisement -

Related news

error: Content is protected !!