Saturday, June 28, 2025
spot_imgspot_img
spot_imgspot_img

ಥೈಲ್ಯಾಂಡ್‌ನಲ್ಲಿ ವಿಮಾನ ಪತನ; 9 ಮಂದಿ ಸಾವು..!

- Advertisement -
- Advertisement -

ಬ್ಯಾಂಕಾಕ್: ಪ್ರಯಾಣಿಕರಿದ್ದ ಸಣ್ಣ ವಿಮಾನವೊಂದು ಥೈಲೆಂಡ್​ನಲ್ಲಿ ಪತನಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಬ್ಯಾಂಕಾಂಕ್​ನಿಂದ ಟೇಕ್ ಆಫ್ ಆಗಿ ಸ್ವಲ್ಪ ಸಮಯದಲ್ಲೇ ಪತನಗೊಂಡಿದೆ.

ವಿಮಾನ ನಿಲ್ದಾಣದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮ್ಯಾಂಗ್ರೋವ್ ಜೌಗು ಪ್ರದೇಶದಲ್ಲಿ ವಿಮಾನದ ಅವಶೇಷಗಳು ಕಂಡುಬಂದಿವೆ ಎಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿವೆ. ವಿಮಾನದಲ್ಲಿದ್ದವರ ಗುರುತು ಸ್ಪಷ್ಟವಾಗಿಲ್ಲ, 7 ಪ್ರಯಾಣಿಕರು, ಇಬ್ಬರು ಪೈಲಟ್​ಗಳು ಇದ್ದರು ಎಂದು ಹೇಳಲಾಗುತ್ತಿದೆ.

ವಿಮಾನದಲ್ಲಿದ್ದವರಲ್ಲಿ ಐವರು ಹ್ಯಾಂಕಾಂಗ್​, ಚೀನೀ ಪ್ರವಾಸಿಗರು ಹಾಗೂ ಸಿಬ್ಬಂದಿ ಎಂದು ವರದಿಯಾಗಿದೆ. 300ಕ್ಕೂ ಹೆಚ್ಚು ಸೇನಾ ಸಿಬ್ಬಂದಿ, ಸ್ವಯಂಸೇವಕರನ್ನು ಶೋಧ ಕಾರ್ಯದಲ್ಲಿ ನಿಯೋಜಿಸಲಾಗಿದ್ದು, ಅಪಘಾತದ ಕಾರಣ ಗುರುತಿಸಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!