Monday, June 15, 2026
spot_imgspot_img
spot_imgspot_img

ಮಂಗಳೂರು : ಅಕ್ರಮವಾಗಿ ಜೂಜಾಟ ಆಡುತ್ತಿದ್ದ 11 ಮಂದಿ ಬಂಧನ

- Advertisement -
- Advertisement -

ಮಂಗಳೂರು : ಲಾಕ್-ಡೌನ್ ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಜೂಜಾಟ ಆಡುತ್ತಿದ್ದ 11 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಮಂಗಳೂರಿನ ಬಿಕರ್ನಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಆಂದರ್- ಬಾಹರ್ ಆಟ ಆಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ 11 ಮಂದಿಯನ್ನು ವಶಕ್ಕೆ ಪಡೆದುಕೊಂಡರು.

ಬಂಧಿತರನ್ನು ರಾಜೇಂದ್ರ ಹಲ್ದಾರ್(41), ಕನಕಪ್ಪ ಕೋಟಿ(40), ರಾಘವೇಂದ್ರ(24), ಉಮೇಶ ರಾಮಪ್ಪ ಚೌಡಪ್ಪ,(24), ಲಕ್ಷ್ಮಪ್ಪ (37), ರೋಹನ್ (24), ಲಕ್ಕಪ್ಪ, ಹನುಮಪ್ಪ ವಾಲಿಕಾರ್(26), ಬಾಸ್ಕರ (54) ಚಿದಾನಂದ (25), ಶಿವಲಿಂಗಪ್ಪ(30) ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.

ಬಂಧಿತರಿಂದ ಜೂಜಾಟಕ್ಕೆ ಬಳಸಿದ 90.000 ರೂ. ನಗದು, ಮೊಬೈಲ್ ಫೋನುಗಳು ಹಾಗು ಇತರ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!