Tuesday, July 1, 2025
spot_imgspot_img
spot_imgspot_img

ಹಿಮಾಚಲ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

- Advertisement -
- Advertisement -

ನವದೆಹಲಿ: ಎಲ್ಲೆಡೆ ದೀಪಾವಳಿ ಸಂಭ್ರಮ.. ಪ್ರಧಾನಿ ನರೇಂದ್ರ ಮೋದಿ ಈ ಬಾರಿ ದೀಪಾವಳಿ ಸಂಭ್ರಮವನ್ನು ಹಿಮಾಚಲ ಪ್ರದೇಶದ ಲೆಪ್ಚಾಗೆ ಆಗಮಿಸಿ ಭದ್ರತಾ ಪಡೆಗಳೊಂದಿಗೆ ಆಚರಿಸಿದರು.
ನಮ್ಮ ದೇಶದ ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾವನ್ನು ತಲುಪಿದ್ದೇನೆ ಎಂದು ಪ್ರಧಾನಿ ಪೋಸ್ಟ್ ಮಾಡಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಲೆಪ್ಚಾ ವಾಯುನೆಲೆಗೆ ಬಂದಿಳಿದ ಅವರು ದೀಪಾವಳಿಯಂದು ಹಿರಿಯ ಅಧಿಕಾರಿಗಳನ್ನು ಮತ್ತು ಯೋಧರನ್ನು ಭೇಟಿ ಮಾಡಿದರು.

ಇಂಡೋ -ಟಿಬೆಟಿಯನ್ ಬಾರ್ಡರ್ ಪೋಲೀಸ್ ಮತ್ತು ಭಾರತೀಯ ಸೇನೆಯ ಪಡೆಗಳು ಹಿಮಾಚಲ ಪ್ರದೇಶದಲ್ಲಿ LAC ಅನ್ನು ಸುರಕ್ಷಿತವಾಗಿರಿಸಲು ನಿಯೋಜಿಸಲಾಗಿದೆ.
ಇಂದು ಪ್ರಧಾನಿ ಮೋದಿ ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, “ಎಲ್ಲರಿಗೂ ದೀಪಾವಳಿಯ ಶುಭಾಶಯಗಳು! ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿಸಂತೋಷ, ಸಮೃದ್ಧಿಮತ್ತುಅದ್ಭುತ ಆರೋಗ್ಯವನ್ನು ತರಲಿ ಎಂದು ಅವರು ಪೋಸ್ಟ್ ಮಾಡಿದ್ದಾರೆ.

- Advertisement -

Related news

error: Content is protected !!