Thursday, May 2, 2024
spot_imgspot_img
spot_imgspot_img

ಪೊಗರು ವಿವಾದಕ್ಕೆ ಸುಖಾಂತ್ಯ – ಚಿತ್ರದ 14 ದೃಶ್ಯಗಳಿಗೆ ಕತ್ತರಿ..!

- Advertisement -G L Acharya panikkar
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ ಸಿನಿಮಾದಲ್ಲಿನ ದೃಶ್ಯ ಬ್ರಾಹ್ಮಣ ಸಮುದಾಯದ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವ ಮೂಲಕ ಚಿತ್ರ ತಂಡ ವಿವಾದಕ್ಕೆ ತೆರೆ ಎಳೆದಿದೆ.

ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವಲ್ಲೇ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಪೊಗರು ಬಿಡುಗೆಯಾಗಿದ್ದು, ಎಲ್ಲಾ ಥಿಯೇಟರ್ ಗಳಲ್ಲಿಯೂ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ. ಧ್ರುವ ಸರ್ಜಾ ನಟನೆಯ ಸಿನಿಮಾದ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.

ಹಾಡು, ಫೈಟ್ ಮೂಲಕ ಅಭಿಮಾನಿಗಳಿಗೆ ಹುಚ್ಚು ಹಿಡಿಸಿರುವ ಪೊಗರು ಸಿನಿಮಾದಲ್ಲಿನ ಆ ಒಂದು ದೃಶ್ಯ ವಿವಾದವನ್ನು ಹುಟ್ಟುಹಾಕಿತ್ತು. ಸಿನಿಮಾದ ದೃಶ್ಯವೊಂದರಲ್ಲಿ ಪೂಜೆಯಲ್ಲಿ ನಿರತರಾಗಿದ್ದ ಅರ್ಚಕರ ಭುಜದ ಮೇಲೆ ಕಾಲು ಇಟ್ಟಿರೋದು ವಿವಾದಕ್ಕೆ ಕಾರಣವಾಗಿತ್ತು.

ಈ ದೃಶ್ಯಕ್ಕೆ ಬ್ರಾಹ್ಮಣ ಸಮುದಾಯ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ವಿವಾದ ವ್ಯಕ್ತವಾಗುತ್ತಿದ್ದಂತೆಯೇ ನಿರ್ದೇಶಕ ನಂದ ಕಿಶೋರ್ ಅವರು ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಿದ್ದಾರೆ. ವಿವಾದಿತ ದೃಶ್ಯವನ್ನು ತೆಗೆದಿರುವುದಕ್ಕೆ ಬ್ರಾಹ್ಮಣ ಮಹಾಸಭಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊನೆಗೂ ಪೊಗರು ವಿವಾದ ಸುಖಾಂತ್ಯವನ್ನು ಕಂಡಂತಾಗಿದೆ. ಸಂಜೆಯ ವೇಳೆಯಲ್ಲಿ ಎಡಿಟೆಡ್ ವರ್ಷನ್ ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ನಿರ್ದೇಶಕ ನಂದಕಿಶೋರ್ ತಿಳಿಸಿದ್ದಾರೆ.

- Advertisement -

Related news

error: Content is protected !!