Sunday, June 29, 2025
spot_imgspot_img
spot_imgspot_img

ಸುರತ್ಕಲ್ ನಲ್ಲಿ ರೌಡಿಶೀಟರ್ ಗಳ ಪರೇಡ್ ನಡೆಸಿದ ಪೊಲೀಸ್ ಕಮಿಷನರ್!

- Advertisement -
- Advertisement -

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸುರತ್ಕಲ್ ನಲ್ಲಿ 130 ಮಂದಿ ರೌಡಿಶೀಟರ್ ಗಳ ಪರೇಡ್ ನಡೆಸಿ, ಕ್ಲಾಸ್ ತೆಗೆದುಕೊಂಡರು.

ರೌಡಿ ಶೀಟರ್ ಹಿನ್ನೆಲೆ ಇರುವ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತರು ಪರೇಡ್ ನಡೆಸಿದರು. ಈ ಸಂದರ್ಭ ಪೊಲೀಸ್ ಕಮಿಷನರ್ ರೌಡಿ ಶೀಟರ್ ಗಳಿಗೆ ನೀಟಾಗಿ ಕಟ್ಟಿಂಗ್, ಶೇವಿಂಗ್ ಮಾಡಿಕೊಳ್ಳಲು ವಾರ್ನಿಂಗ್ ಮಾಡಿದರು.ಅಲ್ಲದೆ, ಒಬ್ಬೊಬ್ಬ ರೌಡಿ ಶೀಟರ್ ಗಳ ವಿಚಾರಣೆ ನಡೆಸಿದ ಪೊಲೀಸ್ ಆಯುಕ್ತರು, ಕೇಸ್ ಯಾವುದೆಂದು ರೌಡಿಗಳ ಬಳಿಯೇ‌ ವಿಚಾರಿಸಿ ಮಾಹಿತಿ ಪಡೆದರು.

ನಮ್ಮದು ಗ್ಯಾಂಗ್ ವಾರ್ ಎಂದು ಹೇಳಿದ ರೌಡಶೀಟರೊಬ್ಬನಿಗೆ ಕ್ಲಾಸ್ ತೆಗೆದುಕೊಂಡ ಪೊಲೀಸ್ ಆಯುಕ್ತರು’ಏನು ದೊಡ್ಡ ಗ್ಯಾಂಗ ನಿನ್ನದು, ಎಲ್ಲ ಗ್ಯಾಂಗ್ ನ್ನು ಇಲ್ಲದಂಗೆ ಮಾಡ್ತಿನಿ’ ಎಂದು ಖಡಕ್ ಎಚ್ಚರಿಕೆ ಕೊಟ್ಟರು. ದೇವರಿಗೆ ಕೂದಲು ಬಿಟ್ಟಿದ್ದೀನಿ ಎಂದು ಹೇಳಿದ ಮತ್ತೊಬ್ಬ ರೌಡಿಶೀಟರ್ ಗೆ ‘ಕೆಟ್ಟ ಕೆಲಸ ಮಾಡಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಮಾಡ್ತೀರಾ’ ಅಂತ ಕ್ಲಾಸ್ ತೆಗೆದುಕೊಂಡರು.

- Advertisement -

Related news

error: Content is protected !!