Sunday, April 28, 2024
spot_imgspot_img
spot_imgspot_img

ಮಂಗಳೂರು : ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ.. ಯುವತಿಯರ ರಕ್ಷಣೆ.

- Advertisement -G L Acharya panikkar
- Advertisement -

ಮಂಗಳೂರು: ನಗರದ ವೆಲೆನ್ಸಿಯಾದ ಫ್ಲ್ಯಾಟ್​ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.ವೆಲೆನ್ಸಿಯಾದ ಅಪಾರ್ಟ್​ಮೆಂಟ್​ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್ ಇನ್ಸ್​ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

ಅಫೀಜ್ ಎಂಬಾತನ ಫ್ಲ್ಯಾಟ್​ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು. ದಾಳಿ ವೇಳೆ ಇಬ್ಬರು ಬೆಂಗಳೂರು ಮೂಲದ ಯುವತಿಯರನ್ನು ರಕ್ಷಿಸಲಾಗಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಗಣೇಶ್ ಶೆಟ್ಟಿ, ಫ್ಲ್ಯಾಟ್ ಮಾಲೀಕ ಅಫೀಜ್ ಮತ್ತು ಇವರಿಗೆ ಸಹಕರಿಸುತ್ತಿದ್ದ ಹರಿಣಾಕ್ಷಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!