Wednesday, July 22, 2026
spot_imgspot_img
spot_imgspot_img

ರೀಲ್ಸ್ ಮಾಡಲು ಪೊಲೀಸ್ ವಾಹನ ಬಳಕೆ: ಯುವಕನ ಬಂಧನ

- Advertisement -
- Advertisement -

ಪೊಲೀಸ್ ವಾಹನವನ್ನು ಬಳಕೆ ಮಾಡಿಕೊಂಡು ರೀಲ್ಸ್ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಬಂಧಿತ ಯುವಕ ಮೊಯಿನ್ ಖಾನ್ ಎಂದು ಗುರುತಿಸಲಾಗಿದೆ.

ಇಂದಿರಾಪುರಂ ಪ್ರದೇಶದಲ್ಲಿ ಅಧಿಕಾರಿಗಳು ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ನಿರತರಾಗಿದ್ದಾಗ ಮೊಯಿನ್ ಖಾನ್ ಪೊಲೀಸ್ ವಾಹನ ಬಳಸಿ ವೀಡಿಯೊ ಮಾಡಿದ್ದು, ಇಂದಿರಾಪುರಂನ ಕಣವಾಣಿ ಸೇತುವೆಯ ಬಳಿ ಟ್ರಾಫಿಕ್ ಜಾಮ್ ತೆರವುಗೊಳಿಸಲು ತೊಡಗಿದ್ದಾಗ, ಖಾಲಿ ಪೊಲೀಸ್ ವಾಹನವನ್ನು ಗಮನಿಸಿದ ಯುವಕ ರೀಲ್ ಮಾಡಿದ್ದು, ವೀಡಿಯೊ ವ್ಯಾಪಕ ಗಮನ ಸೆಳೆದ ನಂತರ ಅಧಿಕಾರಿಗಳು ಕ್ರಮ ಕೈಗೊಂಡು ಯುವಕನನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!