Monday, September 26, 2022
spot_imgspot_img
spot_imgspot_img

ಮ್ಯಾಜಿಕ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿಟ್ಲದ ಪ್ರತಿಭೆ ಪ್ರದ್ಯುಮ್ನ ಶೆಟ್ಟಿ; D. P. S ಮೆಜಿಷಿಯನ್ ಉದ್ಘಾಟನಾ ಕಾರ್ಯಕ್ರಮ

- Advertisement -G L Acharya G L Acharya
- Advertisement -

ಪ್ರದ್ಯುಮ್ನ ಶೆಟ್ಟಿ ಇವರು ಮ್ಯಾಜಿಕ್ ಕ್ಷೇತ್ರ ದಲ್ಲಿ ಸಾಧನೆ ಮಾಡುತ್ತಿರುವ ವಿಟ್ಲದ ಪ್ರತಿಭೆ. ಇದೀಗ ತನ್ನದೇ ಆದ ಮ್ಯಾಜಿಕ್ ತಂತ್ರದ ಮೂಲಕ ಪ್ರೇಕ್ಷಕರನ್ನು ಮನರಂಜಿಸಲು D. P. S ಮ್ಯಾಜಿಕ್ ತಂಡವನ್ನು ರಚಿಸಿ ಮುನ್ನಡೆಸಲು ಮುಂದಾಗಿದ್ದಾರೆ.

D. P. S ಮೆಜಿಷಿಯನ್ ಇದರ ಉದ್ಘಾಟನಾ ಕಾರ್ಯಕ್ರಮ ಶ್ರೀ ಚಾಮುಂಡಿ ಗುಳಿಗ ಕಲ್ಲುರ್ಟಿ ಸ್ಥಾನ ದೇವಸ್ಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಸುರೇಶ್ ಮುಕ್ಕುಡ ಆಡಳಿತ ಮೊಕ್ತೇಸರರು ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನ ಕೋಲ್ಪೆ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ರಾಜರಾಮ್ ಶೆಟ್ಟಿ ಕೋಲ್ಪೆಗುತ್ತು ಅಧ್ಯಕ್ಷರು ಜೇನು ಸಾಕಾಣಿಕ ಸಂಘ ದಕ್ಷಿಣ ಕನ್ನಡ ಇವರು ಪೋಸ್ಟರ್ ಬಿಡುಗಡೆ ಮಾಡಿ ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಿದರು.

ಮುಖ್ಯ ಅತಿಥಿಗಳಾಗಿ ಸಿದ್ದಿ ವಿನಾಯಕ ಯುವಕ ಮಂಡಲದ ಗೌರವಧ್ಯಕ್ಷ ಜನಾರ್ಧನ ಕಾರ್ಯಾಡಿ, ಸ್ಥಳೀಯರು, ಕಲಾಪೋಷಕ ಸೃಜನ್ ದೇವಸ್ಯ, ಕ್ಷೇತ್ರದ ಆರಾಧಕರು ಆನಂದ ದೇವಸ್ಯ, ಹಾಗೂ ನೂರಾರು ಕಲಾ ಪ್ರೇಮಿಗಳು ಉಪಸ್ಥಿತರಿದ್ದರು. ಕಂಬಳಬೆಟ್ಟು ದಿನೇಶ್ ಶೆಟ್ಟಿ ಹಾಗೂ ಹೇಮಾವತಿ ಡಿ ಶೆಟ್ಟಿಯವರ ಪುತ್ರ ಪ್ರದ್ಯುಮ್ನ ಶೆಟ್ಟಿ.

- Advertisement -

Related news

error: Content is protected !!