- Advertisement -
- Advertisement -
ವಿಟ್ಲ: ವಿಟ್ಲ ಕಸಬಾ ಗ್ರಾಮದ ನೀರಕಣಿ ನಿವಾಸಿ ಉದ್ಯಮಿ ವಿ. ಸೀತಾರಾಮ (೬೮) ಶುಕ್ರವಾರ ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ಹೃದಯ ಸಂಬಂಧೀ ಸಮಸ್ಯೆಯಿಂದ ನಿಧನರಾಗಿದ್ದಾರೆ. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಗೂಡಂಗಡಿಯಿಂದ ವೃತ್ತಿ ಆರಂಭಿಸಿದ ಇವರು ಇಂದು ಪ್ರತಿಷ್ಠಿತ ಪ್ರಿಂಟ್ ಪಾಯಿಂಟ್ ಮುದ್ರಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ.
ಸುಮಾರು ೪೦ ವರ್ಷಗಳಿಂದ ವಿಟ್ಲದಲ್ಲಿ ನಡೆಸಿಕೊಂಡು ಬಂದಿದ್ದಾರೆ. ವಿಟ್ಲ ಜೋಗಿ ಮಠದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಇವರು ವಿಟ್ಲ ಜೋಗಿ ಸುಧಾರಕ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
- Advertisement -