Thursday, March 28, 2024
spot_imgspot_img
spot_imgspot_img

ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ, ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ಸ್ ಮತ್ತು ಜನವಾದಿ ಮಹಿಳಾ ಸಂಘಟನೆ ವತಿಯಿಂದ ನಾಡಕಚೇರಿ ಬಳಿ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ: ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ ಮತ್ತು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ಸ್, ಜನವಾದಿ ಮಹಿಳಾ ಸಂಘಟನೆ ವತಿಯಿಂದ ಖಾಸಗಿ ಫೈನಾನ್ಸ್‌ಗಳಿಂದ ಬಲತ್ಕಾರದ ವಸೂಲಿ ಮತ್ತು ಕಿರುಕುಳ ನಿಲ್ಲಿಸಲು ಒತ್ತಾಯಿಸಿ ವಿಟ್ಲದ ನಾಡಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ ಸಂಚಾಲಕ ಶಿವಕುಮಾರ್ ಅವರು ಬಂಟ್ವಾಳ ತಾಲ್ಲೂಕಿನ ಹಾಗೂ ಜಿಲ್ಲೆಯ ಇತರ ಕೆಲವು ತಾಲ್ಲೂಕುಗಳ ಗ್ರಾಮ ಗ್ರಾಮಗಳಲ್ಲಿ ಖಾಸಗಿ ಫೈನಾನ್ಸ್‌ಗಳಾದ ಮುತ್ತೂಟ್, ಸಮಸ್ತ, ಗ್ರಾಮೀಣ ಕೂಟ, ಸ್ಪಂದನ, ಸ್ಫೂರ್ತಿ ಆಶೀರ್ವಾದ, ಭಾರತ್ ಆಕ್ಸಿಸ್, ಎಸ್‌ಕೆಎಸ್, ಎಲ್ ಆಂಡ್ ಟಿ ಮೊದಲಾದ ಖಾಸಗಿ ಫೈನಾನ್ಸ್‌ಗಳಿಂದ ಹಳ್ಳಿಯ ಮನೆ ಮನೆಗಳಿಗೆ ತೆರಳಿ ಬಡ ಮಹಿಳೆಯಯರನ್ನೇ ಗುರಿಯಾಗಿ ಇಟ್ಟುಕೊಂಡು ದುಬಾರಿ ಬಡ್ಡಿಯಲ್ಲಿ ಸಾಲ ನೀಡಿ, ಸುಲಿಗೆ ಮಾಡುತ್ತಿದ್ದಾರೆ ಎಂದರು.


ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ ಪ್ರತಿಯೊಬ್ಬರು ಫೈನಾನ್ಸ್‌ಗಳಿಗೆ ಹಣ ಕಟ್ಟುವುದಿಲ್ಲ ಎಂಬ ತೀರ್ಮಾನ ಕೈಗೊಳ್ಳಬೇಕು. ಇದರಿಂದ ಅವರಿಗೆ ಬುದ್ಧಿ ಬರುತ್ತದೆ. ಫೈನಾನ್ಸ್ ಸಿಬ್ಬಂದಿಗಳು ಮಹಿಳೆಯರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ಕೇಂದ್ರ ಸರ್ಕಾರ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಶ್ರೀಮಂತರಿಗೆ ಕೋಟಿ ಸಾಲ ನೀಡುತ್ತಿದ್ದಾರೆ. ಬಡವರು ಹೋದಾಗ ಬಾಗಿಲಿನಿಂದ ಕಳಿಸುತ್ತಿದ್ದಾರೆ.

ಆದರೆ ಇಂತಹ ಕಾನೂನು ಬಾಹಿರ ಫೈನಾನ್ಸ್‌ಗಳ ಪರ ಸರ್ಕಾರ ನಿಂತಿದೆ. ಒಂದು ಗೂಡಾಂಗಡಿ ತೆರೆಯಲು ಅನುಮತಿ ಬೇಕು. ಇಂತಹ ಫೈನಾನ್ಸ್ ಗಳಿಗೆ ಯಾರೂ ಅನುಮತಿ ಕೊಟ್ಟದು. ಎಂದು ಪ್ರಶ್ನಿಸಿದ ಅವರು ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸಲಾಗಿದೆ. ಬಡವರ ಸಾಲ ಮನ್ನಾವಿಲ್ಲ. ಶ್ರೀಮಂತರ ಸಾಲ ಮನ್ನಾವಾಗಿದೆ. ಸೀಲ್ ಡೌನ್ ಹೆಸರಿನಲ್ಲಿ ಮಾನಹರಣ ಮಾಡಲಾಗಿದೆ. ಆಸ್ಪತ್ರೆಗಳಲ್ಲಿ ಬಡವರಿಂದ ಲಕ್ಷಗಟ್ಟಲೇ ವಸೂಲು ಮಾಡುತ್ತಿದ್ದಾರೆ ಎಂದು ದೂರಿದರು. ಬಳಿಕ ಉಪತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ವಿಟ್ಲ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಲಾಯಿತು.


ಜೆಎಎಂಎಸ್ ಜಿಲ್ಲಾ ಕಾರ್ಯದರ್ಶಿ ಜಯಂತಿ ಬಿ ಶೆಟ್ಟಿ, ವಕೀಲ ತುಳಸೀದಾಸ್, ಪ್ರಜಾಪರಿವರ್ತನ ವೇದಿಕೆ ಮುಖಂಡ ಕೃಷ್ಣಪ್ಪ ಪುದ್ದೋಟು, ಬಿ.ಟಿ ಕುಮಾರ್, ಲಿಯಾಕತ್ ಖಾನ್, ಮಹಮ್ಮದ್ ಇಕ್ಬಾಲ್ ಹಳೆ ಮನೆ ಭಾಗವಹಿಸಿದ್ದರು.

- Advertisement -

Related news

error: Content is protected !!