Saturday, October 12, 2024
spot_imgspot_img
spot_imgspot_img

ಮಂಗಳೂರಿನ ಪ್ರಖ್ಯಾತ ಖಾಸಗಿ ಆಸ್ಪತ್ರೆಯ ನರ್ಸಿಂಗ್  ಹೋಮ್ ನ ಬೇಜಾಬ್ದಾರಿ..! ಜೀವದ ಹಂಗು ತೊರೆದು  ಆರೈಕೆ ಮಾಡುವ ನರ್ಸ್ಗಳಿಗೆ ಇಲ್ಲಿ ಬೆಲೆ ಇಲ್ಲ.! ಕೋವಿಡ್ ಹೊರ ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ, ತನ್ನ ಸಿಬ್ಬಂದಿಗಳನ್ನು ಸರ್ಕಾರಿ ಆಸ್ಪತ್ರೆ ಕಳಿಸುತ್ತಿರುವ ಆಡಳಿತ ಮಂಡಳಿ.!

- Advertisement -
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ಮಂಗಳೂರು:- ಕೋವಿಡ್ 19 ವಿಶ್ವವನ್ನೇ ಆವರಿಸಿರುವ ಈ ಸಂದರ್ಭದಲ್ಲಿ  ತಮ್ಮ ಜೀವದ ಹಂಗನ್ನು ತೊರೆದು ರೋಗಿಗಳ ಆರೈಕೆ ಮಾಡುತ್ತಿರುವ ನರ್ಸ್ ಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಮಂಗಳೂರು ನಗರದ ಕಂಕನಾಡಿಯ ಬೈಪಾಸ್ ನಲ್ಲಿರುವ ಖಾಸಗಿ ನರ್ಸಿಂಗ್ ಹೋಮ್ ತಾಜಾ ಉದಾಹರಣೆ ಆಗಿದೆ.ಕಂಕನಾಡಿಯ ಬೈಪಾಸ್ ನಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ನರ್ಸಿಂಗ್ ಹೋಮ್ ನ ಇಬ್ಬರು ಸಿಬ್ಬಂದಿಗೆ ಮೊನ್ನೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಈ ಇಬ್ಬರು ನರ್ಸ್ ಗಳು  ಕಳೆದ ಒಂದು ವಾರದಿಂದ ತಲೆನೋವು ಮತ್ತು ಗಂಟಲು ಸೋಂಕಿನಿಂದ ಬಳಲುತ್ತಿದ್ದರು. ಇದೇ ತಿಂಗಳ 11ರಂದು ವರದಿ ಬಂದ ಬಳಿಕ ಸೋಂಕಿತ ಇಬ್ಬರು ನರ್ಸ್ ಗಳನ್ನು ದೇರಳಕಟ್ಟೆಯಲ್ಲಿರುವ ತಮ್ಮ‌ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಸೊಂಕಿತ ಇಬ್ಬರು ನರ್ಸ್ ಗಳ ಜತೆ ಹಾಸ್ಟೆಲ್ ರೂಮ್ ನಲ್ಲಿದ್ದ ಇತರ ಐದು ಮಂದಿಯನ್ನು ಅದೇ ಹಾಸ್ಟೆಲ್ ನಲ್ಲಿಡಲಾಗಿದೆ. ಅವರ ಪಕ್ಕದ ರೂಮ್ ನಲ್ಲಿದ್ದ ಇನ್ನೂ ಆರು ಮಂದಿಯನ್ನು ಕಂಕನಾಡಿಯ ಬೈಪಾಸ್ ನಲ್ಲಿರುವ ತನ್ನ ನರ್ಸಿಂಗ್ ಹೋಮ್ ಗೆ ಕರೆಸಿಕೊಂಡಿದ್ದಾರೆ. ಆದರೆ ಅವರಿಗೆ ರೂಮ್ ನ ವ್ಯವಸ್ಥೆ ಬಿಟ್ಟರೆ ಬೇರೆನೂ ವ್ಯವಸ್ಥೆಯನ್ನು ನರ್ಸಿಂಗ್ ಹೋಮ್ ನ ಆಡಳಿತ ಮಂಡಳಿ ಮಾಡಿಲ್ಲ. ನರ್ಸಿಂಗ್ ಹೋಮ್ ನ ಮ್ಯಾನೇಜರ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸಿಬ್ಬಂದಿ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ. ಅತ್ತ ಹಾಸ್ಟೆಲ್ ನ್ನು ಸ್ಯಾನಿಟೈಸ್ ಮಾಡಿಲ್ಲ.
ಆಡಳಿತ ಮಂಡಳಿಯ ಈ ದುರ್ವರ್ತನೆ ಸಿಬ್ಬಂದಿಯ ಆಕ್ರೋಶಕ್ಕೆ ಕಾರಣವಾಗಿದೆ.

ಹಾಸ್ಟೆಲ್ ನಲ್ಲಿದ್ದ ಐವರು ಮತ್ತು ಶಸ್ತ್ರ ಚಿಕಿತ್ಸಾ ಘಟಕದಲ್ಲಿದ್ದ ನಾಲ್ವರ ಗಂಟಲು ದ್ರವವನ್ನು ಕೊಡಿಯಾಲ್ ಬೈಲ್ ನಲ್ಲಿರುವ ತನ್ನದೇ ಸ್ಪೆಷಾಲಿಟಿ ಆಸ್ಪತ್ರೆ ಯಲ್ಲಿ ಪಡೆದುಕೊಂಡಿತ್ತು. ಆದರೆ ಎಲ್ಲರ ಗಂಟಲು ದ್ರವ ವನ್ನು ಆಡಳಿತ ಮಂಡಳಿ  ಪರೀಕ್ಷೆಗೊಳಪಡಿಸದೆ ಐವರ ಸ್ಯಾಂಪಲ್ ನ್ನು ಬಿಸಾಕಿದೆ. ನಿನ್ನೆ ಪುನಃ ಸ್ಯಾಂಪಲ್ ನೀಡುವಂತೆ ಒತ್ತಡ ಹೇರಿದ ಆಡಳಿತ ಮಂಡಳಿ ಐವರನ್ನು ತನ್ನ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಗೆ ಬಂದ ಸಿಬ್ಬಂದಿಯನ್ನು ಆರು ಗಂಟೆಯವರೆಗೂ ಸತಾಯಿಸಿ “ಮ್ಯಾನೆಜ್‌ಮೆಂಟ್‌ ನಿಂದ ಸ್ಯಾಂಪಲ್ ಪಡೆಯಲು ಅನುಮತಿ ಸಿಕ್ಕಿಲ್ಲ ” ಎಂಬ ನೆಪ ಹೇಳಿ ಅಲ್ಲಿನ ಲ್ಯಾಬ್ ಸಿಬ್ಬಂದಿ ಕಳುಹಿಸಿಕೊಟ್ಟಿದ್ದಾರೆ.
ಈ ನಡುವೆ ಇಂದು ಸಿಬ್ಬಂದಿಯೋರ್ವರ ಮನೆಯವರು ನರ್ಸಿಂಗ್ ಹೋಮ್ ನ ಮ್ಯಾನೇಜರ್ ಗೆ ಕರೆ ಮಾಡಿದ್ದು, ಸಂಸ್ಥೆಯ ದುರ್ವರ್ತನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನದೇ ನರ್ಸಿಂಗ್ ಹೋಮ್ ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಕರೆ‌ಮಾಡಿದ ಮ್ಯಾನೇಜರ್ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡುವಂತೆ ಹೇಳಿದ್ದು, ಅಲ್ಲಿ ತಮ್ಮ ಸಂಸ್ಥೆಯ ಹೆಸರು ಹೇಳಬಾರದು ಎಂದು ಆದೇಶ ಮಾಡಿದೆ. ಮುಂದೆ ಆಗುವ ಎಲ್ಲಾ ಅನಾಹುತಕ್ಕೆ ನೀವೆ ಹೊಣೆ ಎಂದು ಆಡಳಿತ ಮಂಡಳಿ ಸಿಬ್ಬಂದಿಯನ್ನು ಬೆದರಿಸಿದೆ.
ಇದರ ಮಧ್ಯೆ ಐವರು ನರ್ಸ್ ಗಳು ವೆನ್ಲಾಕ್ ಆಸ್ಪತ್ರೆ ಗೆ ಹೋಗಿ ಗಂಟಲು ದ್ರಮ ಪರೀಕ್ಷೆ ಗೆ ಮುಂದಾಗಿದ್ದಾರೆ.

- Advertisement -

Related news

error: Content is protected !!