





ಧರ್ಮನಗರ: ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರದಲ್ಲಿ . 21 ರಿಂದ ಡಿ. 25 ರ ವರೆಗೆ ವೈದ್ಯನಾಥ, ಮಲರಾಯ ಸಪರಿವಾರ ದೈವಗಳ ಸಾನ್ನಿಧ್ಯವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವವು ಇಂದಿನಿಂದ ಪ್ರಾರಂಭಗೊಂಡಿದೆ.

ವೆ| ಮೂರ್ತಿ ಜಯರಾಮ ಜೋಯಿಸರು ಬಡೆಜ ನಿತ್ಯ ತಂತ್ರಿಗಳು ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸನ್ನಿಧಿ ಮಲರಾಯ ಜೇರ ಮಲರಾಯ ಜೇರದಲ್ಲಿ ಹಸಿರು ಹೊರಕಾಣಿಕೆ ರಥಕ್ಕೆ ಚಾಲನೆ ನೀಡಿದರು.

ಬಳಿಕ ಕುಳ- ಇಡ್ಕಿದು- ವಿಟ್ಲ ಮೂಡ್ನೂರು ಮೂರು ಗ್ರಾಮಗಳಿಂದ ಜೇರ ಕ್ಷೇತ್ರಕ್ಕೆ ಆಕರ್ಷಣಿಯ ಹಸಿರು ಹೊರಕಾಣಿಕೆ ಸಾಗಿಬಂತು. ಹಸಿರು ಹೊರಕಾಣಿಕೆಯಲ್ಲಿ ಸುಮಾರು 30 ಕ್ಕೂ ಅಧಿಕ ಪಿಕಪ್ ವಾಹನಗಳಲ್ಲಿ ಅಕ್ಕಿ, ಅಡಿಕೆ, ತರಕಾರಿ, ಬಾಳೆ ಎಲೆ, ವೀಳ್ಯದೆಲೆ, ತೆಂಗಿನಕಾಯಿ, ಮುಂತಾದ ವಸ್ತುಗಳು ಮೆರುಗು ನೀಡಿತ್ತು.

ಅಡ್ಯಲಾಯ ದೈವಸ್ಥಾನ ಕಬಕದಿಂದ ಹೊರಟ ಹಸಿರು ಹೊರಕಾಣಿಕೆಯ ರಥಕ್ಕೆ ಬಿಜೆಪಿ ಮುಖಂಡರು ಅರುಣ್ ಕುಮಾರ್ ಪುತ್ತಿಲ ಚಾಲನೆ ನೀಡಿದರು.

ಬಳಿಕ ವಸಂತ್ ಕುಮಾರ್ ಅಮೈ ಅಧ್ಯಕ್ಷರು ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಇವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ಮುಖಂಡರು ಪುತ್ತೂರು, ಕೃಷ್ಣಪ್ಪ ಪೂಜಾರಿ ಪಾಂಡೇಲು, ಪುನೀತ್ ಮಾಡತ್ತಾರು, ಅಧ್ಯಕ್ಷರು ವಿಟ್ಲ ಮೂಡ್ನೂರು ಗ್ರಾಮ ಪಂಚಾಯತ್, ಉದಯ ಗೋವಿಂದಯ್ಯ ಅಧ್ಯಕ್ಷರು ಇಡ್ಕಿದು ಹಾಲು ಉತ್ಪಾದಕರ ಸಹಕಾರ ಸಂಘ, ರಾಮಚಂದ್ರ ನಾಯಕ್ ಅಧ್ಯಕ್ಷರು ಕುಂಡಡ್ಕ ಹಾಲು ಉತ್ಪಾದಕರ ಸಹಕಾರ ಸಂಘ, ಶ್ರೀಧರ್ ಭಟ್ ಕೊವೆತ್ತಿಲ, ಅಧ್ಯಕ್ಷರು ಮಿತ್ತೂರು ಹಾಲು ಉತ್ಪಾದಕರ ಸಹಕಾರ ಸಂಘ,, ಲಿಂಗಪ್ಪ ಗೌಡ ಎಸ್, ಅಧ್ಯಕ್ಷರು ಸೂರ್ಯ ಹಾಲು ಉತ್ಪಾದಕರ ಸಹಕಾರ ಸಂಘ, ದಾಮೋದರ ನೆಕ್ಕರೆ ಅಧ್ಯಕ್ಷರು ಕಬಕ ಹಾಲು ಉತ್ಪಾದಕರ ಸಹಕಾರ ಸಂಘ, ಸದಾಶಿವ ವಿ ಯಸ್ ಅಡ್ಯಾಲುಕೆರೆ, ಪ್ರವೀಣ್ ಕುಮಾರ್ ಶೆಟ್ಟಿ ಅಳಕೆಮಜಲು ಉದ್ಯಮಿಗಳು, ಕೃಷ್ಣ ಭಟ್ ಮೀರಾವನ, ಅಧ್ಯಕ್ಷರು ಉಳ್ಳಾಕುಲು ಮಲರಾಯ ದೈವಸ್ಥಾನ ಕೆದಿಲ, ಚಂದ್ರಶೇಖರ ನಾಯ್ಕ್, ಅಧ್ಯಕ್ಷರು ಶ್ರೀ ಧರ್ಮಸೇವಾ ಮಿತ್ರ ಮಂಡಳಿ ರಿ. ಕಬಕ, ಶಕುಂತಳಾ ಟಿ ಶೆಟ್ಟಿ, ಮಾಜಿ ಶಾಸಕಿ ಪುತ್ತೂರು, ರಾಧಕೃಷ್ಣ ರೈ ಬೂಡಿಯಾರ್, ಕೆ ಬಿ ರಾಜರಾಮ್ ಗಿರಿಜಾ ಡೆಂಟಲ್ ಕ್ಲಿನಿಕ್ ಉಪ್ಪಿನಂಗಡಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜೈದೀಪ್ ಅಮೈ ಕಾರ್ಯಕ್ರಮ ನಿರೂಪಿಸಿದರು.