Wednesday, July 2, 2025
spot_imgspot_img
spot_imgspot_img

ವೈದ್ಯನಾಥ ಮಲರಾಯ ಸಪರಿವಾರದ ದೈವಸ್ಥಾನದ ಬ್ರಹ್ಮಕಲಶ* *ಸದೃಢ ಸಶಕ್ತ ಹಿಂದೂ ಸಮಾಜ ಕಟ್ಟದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ: ಶ್ರೀಕಾಂತ ಶೆಟ್ಟಿ*

- Advertisement -
- Advertisement -

ವಿಟ್ಲ: ದೇವಸ್ಥಾನ ದೈವಸ್ಥಾನ ಕೇಂದ್ರೀಕೃತವಾಗಿ ಜಾತಿ ಮತವನ್ನು ಬದಿಗಿಟ್ಟು ಹಿಂದೂ ಸಮಾಜ ಸಂಘಟನೆ ಆಗುವುದು ಅಗತ್ಯ. ಸದೃಢ ಸಶಕ್ತ ಸಮಾಜ ಕಟ್ಟದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಾಮಾಜಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿಹೇಳಿದರು.

ಅವರು ಕಂಬಳಬೆಟ್ಟು ಧರ್ಮನಗರ ಮಲರಾಯ ಜೇರದ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ಸಾನಿಧ್ಯ ವೃದ್ಧಿ ಬ್ರಹ್ಮಕಲಶಾಭಿಷೇಕ ಮತ್ತು ನೇಮೋತ್ಸವ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.ಧರ್ಮ ಶಿಕ್ಷಣ ಪಡೆಯುವುದು ಅಗತ್ಯ ‌ ಧರ್ಮ ಶಿಜ್ಷಣ ಎಂದರೆಇನ್ನೊಂದು ಧರ್ಮವನ್ನು ದ್ವೇಷಿಸುವುದು ಅಲ್ಲ‌ ನಮ್ಮ ಧರ್ಮವನ್ನು ಉಳಿಸುವುದು .ಸಂಸ್ಕೃತಿಯನ್ನು ರಕ್ಷಿಸುವುದು ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ಎಂದ ಅವರು ಮಲರಾಯ ವೈದ್ಯನಾಥ ಸಾನ್ನಿಧ್ಯ ಸಂಘಟನೆಯ ಶಕ್ತಿಯನ್ನು ಬಲಿಷ್ಠಗೊಳಿಸಲು ಪ್ರೇರಣೆ ನೀಡಲಿ ಎಂದರು.

ಹಿಂದೂ ಸಮಾಜ ಜಾಗೃತಾವಸ್ಥೆಯಲ್ಲಿ‌ಇರಬೇಕು.ಗುರು ಹಿರಿಯರನ್ನು ಗೌರವಿಸುತ್ತ ದೈವ ದೇವರಆರಾಧನೆಯ ಮೂಲಕ , ಪ್ರಾರ್ಥನೆ ಮೂಲಕ ನೆಮ್ಮದಿ ಸಮೃದ್ಧಿ ಪಡೆಯೋಣ ಎಂದು ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ ಹೇಳಿದರು.ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ಮುಖಂಡರಾದ ಡಾ ಬಿ‌. ಸಂಜೀವ ರೈ, ವೇಣುಗೋಪಾಲ ಶೆಟ್ಟಿ, ಕೆ. ಯೋಗೀಶ್ ಕುಡ್ವ, ದಯಾನಂದ ಶೆಟ್ಟಿ ಉಜಿರೆಮಾರ್, ಸಹಜ್ ಜೆ. ರೈ ಬಳಜ್ಜ, ಪ್ರಕಾಶ ಕೆ. ಎಸ್. ಉರಿಮಜಲು, ಮಾಧವ ಮಾವೆ, ನಾಗೇಶ್ ಕಲ್ಲಡ್ಕ,ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು .ಈ ಸಂದರ್ಭದಲ್ಲಿ ಚರಣ್ ಅಮೈ ಅವರ ಭಕ್ತಿದ ಅರಿಕೆ ಭಕ್ತಿಗೀತೆ ಗಾಯನ ಬಿಡುಗಡೆ ಮಾಡಲಾಯಿತು. ಲಾಸ್ಯ ಅವರು ಅಮೃತವಚನ ಹೇಳಿದರು. ಪ್ರೀತಿಕಾ ಮಂಜಪಾಲು ಪ್ರಾರ್ಥಸಿ, ರಾಮದಾಸ ಶೆಟ್ಟಿಸ್ವಾಗತಿಸಿ, ಈಶ್ವರ ನಾಯ್ಕ ವಂದಿಸಿ, ಸಂಕೇತ್ ಶೆಟ್ಟಿ ಮೂಡಾಯಿಮಾರು ಕಾರ್ಯಕ್ರಮ ನಿರೂಪಿಸಿದರುಬಳಿಕ ಕಲಾ ತಪಸ್ವಿ ಸಾಂಸ್ಕೃತಿಕ ಕಲಾ ಬಳಗದಿಂದ ಮನೋರಂಜನಾ ಕಾರ್ಯಕ್ರಮ, ಅನುರಾಧಾ ಅಡ್ಕಸ್ಥಳ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಜರಗಿತು. ದೈವಗಳ ಸಾನಿಧ್ಯದಲ್ಲಿ ಬ್ರಹ್ಮಕಲಶಕ್ಕೆ ಪೂರ್ವಭಾವಿಯಾಗಿ ಧಾರ್ಮಿಕ ಆಚರಣೆಗಳು ನಡೆದವುಡಿ. 23ರಂದು ಸೋಮವಾರ ಬೆಳಿಗ್ಗೆ ಮಹಾ ಗಣಪತಿ ಹವನ, ಪ್ರಾಸಾದ ಪ್ರತಿಷ್ಠೆ , ಪೀಠ ಪ್ರತಿಷ್ಠೆ ನಡೆದು ಅನಂತರ 9.18 ರಿ0ದ 10.18ರ ಸಮಯ ಮಕರ ಲಗ್ನ ಸುಮುಹೂರ್ತದಲ್ಲಿಸಾನ್ನಿಧ್ಯ ವೃದ್ಧಿ ಬ್ರಹ್ಮಕಲಶ ಅಭಿಷೇಕ ,ಪ್ರತಿಷ್ಠಾ ಬಲಿ ಮತ್ತು ದೈವಗಳಿಗೆ ಬ್ರಹ್ಮಕಲಶದ ಮಹಾ ತಂಬಿಲ ಸೇವೆ ಜರಗಲಿದೆ.

- Advertisement -

Related news

error: Content is protected !!