Tuesday, July 1, 2025
spot_imgspot_img
spot_imgspot_img

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ- (ಮಾ.16) ಆದಿತ್ಯವಾರದ ಕಾರ್ಯಕ್ರಮ

- Advertisement -
- Advertisement -

ಬೊಳ್ನಾಡು ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಮಾರ್ಚ್ 9-3-2025ನೇ ರವಿವಾರದಿಂದ 16-3-2025ನೇ ರವಿವಾರದವರೆಗೆ ನಡೆಯಲಿದೆ.

ದಿನಾಂಕ: 16-3-2025ನೇ ಆದಿತ್ಯವಾರ ಬೆಳಿಗ್ಗೆ 8:00ಕ್ಕೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ, ಪರಿವಾರ ದೈವಗಳ ಕಲಶಪೂಜೆ ನಡೆಯಲಿದೆ. ಬಳಿಕ 11:45ರಿಂದ 12:08ಕ್ಕೆ ವೃಷಭಲಗ್ನದಲ್ಲಿ ಭಂಡಾರ ಕ್ಷೇತ್ರದಲ್ಲಿ ಶ್ರೀ ಭಗವತಿ ಹಾಗೂ ಪರಿವಾರ ದೈವಗಳ ಪೀಠ ಪ್ರತಿಷ್ಠೆ ನಡೆದು ಪ್ರಸಾದ ಭೋಜನ ನಡೆಯಲಿದೆ. 2:20 ರಿಂದ 3:53ರ ಕರ್ಕಾಟಕ ಲಗ್ನದಲ್ಲಿ ಶ್ರೀ ಭಗವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಧ್ವಜ ಪ್ರತಿಷ್ಠೆ, ತಂಬಿಲ, ಮಹಾಪೂಜೆ ನಡೆಯಲಿದೆ.

ಸಂಜೆ 5:00ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕೃಷ್ಣ ಎನ್. ಉಚ್ಚಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಗಾರು ಅರಸರು ವಿಟ್ಲ ಅರಮನೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಅಳಿಕೆ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್. ಕೃಷ್ಣ ಭಟ್, ತೀಯಾ ಸಮಾಜ ಮುಂಬೈ, ಕೈಗಾರಿಕೋದ್ಯಮಿ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಬೆಳ್ಚಾಡ, ತೀಯಾ ಸಮಾಜ ಮುಂಬೈ, ಕೈಗಾರಿಕೋದ್ಯಮಿ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಯತೀಂದ್ರನಾಥ ಪುತ್ತೂರು, ರಾಧೇಶ್ ನಾಯರ್, ಮುಂಬೈ (ಸಿ.ಎ), ಓಮೆಗಾ ಆಸ್ಪತ್ರೆ ಮಂಗಳೂರು ಆಡಳಿತ ನಿರ್ದೇಶಕ ಡಾ| ಮುಕುಂದ, ಡಾ| ದಯಾನಂದ ಕುಂಬಳೆ MBBS (Mumbai) M D MEDICINE (Mumbai) D M CARDIOLOGY (Mumbai) FISE FESC FSCAI Chairman Jayanand Hospitals Mumbai, Managing Trustee Thiya Samaj Mumbai, ತೀಯಾ ಮುಂಬೈ ಘಟಕದ ಆರೋಗ್ಯ ನಿಧಿ ಇದರ ನಿಕಟಪೂರ್ವ ಅಧ್ಯಕ್ಷ, ಬೊಲ್ನಾಡು ಶ್ರೀ ಚಿರುಂಭ ಭಗವತೀ ಮುಂಬೈ ಸಮಿತಿಯ ಅಧ್ಯಕ್ಷ ಹಾಗೂ ಉಪ್ಪಳ ಶ್ರೀ ಭಗವತೀ ಮುಂಬೈ ಸಮಿತಿಯ ಗುರಿಕಾರ ತಿಮ್ಮಪ್ಪ ಬಂಗೇರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಚಂದ್ರಶೇಖರ ಕಾರ್ನವರ್, ಏರಿಯಾಕೋಟ, ಭಗವತೀ ಕ್ಷೇತ್ರ ,ಗೋಪಾಲ ಬೆಳ್ಚಪ್ಪಾಡ ಮೂಡಾಯಿ ಬೆಟ್ಟು, ಉಪ್ಪಳ ಕ್ಷೇತ್ರ , ಕಣ್ಣ ಕಲೇಕಾರರು ಕನಿಲ ಭಗವತೀ ಕ್ಷೇತ್ರ, ಉದ್ಯಮಿ ಉಮೇಶ ಬೆಂಜನಪದವು, 17 ಭಗವತೀ ಕ್ಷೇತ್ರಗಳ ಮೂಪತಿಯರು, ಕರಾಟೆ ತರಬೇತುದಾರ ಮಾಧವ ಸಿಂಹಮೂಲೆ, ಚಂದ್ರಾವತಿ ರೈಲು ಅವಗಡ ತಪ್ಪಿಸಿದವರು, ಸತೀಶ ಬಿ.ಎಂ ಗಿಂಡಿ, ಕನಿಲ ಭಗವತಿ ಕ್ಷೇತ್ರ, ಧಾರ್ಮಿಕ ಕಾರ್ಯ, ಸಮಾಜ ಸೇವಕ, ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಬಾಬು ಪಿಲಾರ್, ಯೋಗಪಟು ಅಶ್ವೀಜ, ವೈಶಾಖ್, ಹೆಬ್ಬಾವಿನಿಂದ ರಕ್ಷಣೆ, ಅಂತರ್‌ರಾಷ್ಟ್ರೀಯ ಈಜುಪಟು ಅಮನ್‌ರಾಜ್, ಕ್ರೀಡಾಪಟು (Long jump) ಹರಿಪ್ರಿಯಾ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.

- Advertisement -

Related news

error: Content is protected !!