- Advertisement -
- Advertisement -


ಬಂಟ್ವಾಳ : ಕಲ್ಲಡ್ಕ ಮೊಗರನಾಡು ಸಾವಿರ ಸೀಮೆ ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನ ವಠಾರದಲ್ಲಿ ಮೇ 2, 3, 4ರಂದು ಹಮ್ಮಿಕೊಳ್ಳಲಾದ ಅತಿಮಹಾರುದ್ರ ಯಾಗ ಪೂರ್ವಬಾವಿ ಸಭೆ ಮಾ. 23 ರಂದು ಕ್ಷೇತ್ರದಲ್ಲಿ ನಡೆಯಿತು.
ಯಾಗ ಸಮಿತಿ ಗೌರವ ಅಧ್ಯಕ್ಷ ರಘುನಾಥ ಸೋಮಯಾಜಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಭಗವಂತನ ಸಂಕಲ್ಪದಿಂದ ಯೋಗ ಕೂಡಿಬಂದಿದೆ. ಕರಾವಳಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಉದ್ಭವಲಿಂಗ ಇರುವಲ್ಲಿ ಇಂತಹ ಯಾಗಕ್ಕೆ ಅವಕಾಶವಿದೆ. ನಾಡಿನ ಸಮಸ್ತ ಭಕ್ತರು ಭಾಗವಹಿಸುವಂತೆ ಕರೆ ನೀಡಿದರು.
- Advertisement -