Thursday, September 12, 2024
spot_imgspot_img
spot_imgspot_img

ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ದಬ್ಬಾಳಿಕೆ ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ..!

- Advertisement -G L Acharya panikkar
- Advertisement -

ಕಾರ್ಕಳದ ಪರಶುರಾಮ್ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಆಧಾರ ರಹಿತ ಆರೋಪದಲ್ಲಿ ತೊಡಗಿದ್ದು, ಪ್ರಸ್ತುತ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪ್ರತಿಮೆ ನಿರ್ಮಿಸಿದ ಶಿಲ್ಪಿಯ ಬೆಂಗಳೂರು ಮನೆಗೆ ತೆರಳಿ ಕಾಂಗ್ರೆಸ್ ನ ಮುಖಂಡರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿ ಇಂದು ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನೆ ನಡೆಸಿತು.

ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನವೀನ್ ನಾಯಕ್ ಮಾತನಾಡಿ ಪರಶುರಾಮ ಮೂರ್ತಿಯ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವ ಹೀನ ಕಾರ್ಯಕ್ಕೆ ಇಳಿದಿದೆ. ಪರಶುರಾಮ ಮೂರ್ತಿಯ ಕೆಲಸ ಸಂಪೂರ್ಣ ಮಾಡಲು ಶಿಲ್ಪಿ ಕೃಷ್ಣ ನಾಯ್ಕ್ ಪ್ರಯತ್ನ ಪಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನವರಿಗೆ ಅದು ಬೇಕಿಲ್ಲ. ಕಾರ್ಕಳ ಕಾಂಗ್ರೆಸ್‌‌ ಅತೃಪ್ತ ಆತ್ಮಗಳಿಂದಾಗಿ ಪರಶುರಾಮರ ಮೂರ್ತಿಯನ್ನು ಸಂಪೂರ್ಣ ಮಾಡಲಾಗದಂತೆ ಆಗಿದೆ. ಶಿಲ್ಪಿ ಮಾಡಿದ ಕಂಚಿನ ಮೂರ್ತಿಯನ್ನು ಪೊಲೀಸ್ ಠಾಣೆಯಲ್ಲಿ ಇಡುವ ನೀಚ ಕಾರ್ಯವನ್ನು ಇಂದು ಕಾಂಗ್ರೆಸ್ ಮಾಡಿದೆ.

ಶಿಲ್ಪಿಯ ಕಾರ್ಯಕ್ಕೆ ತಡೆ ಒಡ್ಡಲು ಕಾಂಗ್ರೆಸ್ ನ ಉದಯ ಕುಮಾರ ಶೆಟ್ಟಿಯವರೇ ಪ್ರಯತ್ನ ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಕಾರ್ಕಳದ ವೃತ್ತ ನಿರೀಕ್ಷಕರು ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರುನಲ್ಲಿ ಉದಯ ಕುಮಾರ ಶೆಟ್ಟಿಯವರು ಕೃಷ್ಣ ನಾಯ್ಕ್ ಮನೆಗೆ ಬಂದಾಗ ಕಾರ್ಕಳದ ವೃತ್ತ ನಿರೀಕ್ಷೆಕರು ಉದಯ ಕುಮಾರ ಶೆಟ್ಟಿಯವರನ್ನು ಕಂಡು ಸಚಿವರಿಗೆ ಸ್ವಾಗತ ಕೋರುವಂತೆ ರೀತಿಯ ವರ್ತನೆ ಮಾಡಿದ್ದಾರೆ. ವೃತ್ತ ನಿರೀಕ್ಷಕರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗೋಪಾಲ ಭಂಡಾರಿ, ವೀರಪ್ಪ ಮೊಯಿಲಿಯವರ ಕಾಲಘಟ್ಟದಲ್ಲಿ ಸೌಹಾರ್ದ ರಾಜಕಾರಣ ಕಾರ್ಕಳದಲ್ಲಿ ಇತ್ತು. ಆದರೆ ಉದಯ ಕುಮಾರ ಶೆಟ್ಟಿಯವರು ಕಾಂಗ್ರೆಸ್ ಗೆ ಬಂದ ನಂತರ ಕಾರ್ಕಳದಲ್ಲಿ ದ್ವೇಷ ರಾಜಕಾರಣ ಮಾಡುವಂತಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ ಕಾರ್ಕಳದಲ್ಲಿ ಕಾಂಗ್ರೆಸ್ ಇದ್ದ ಕಾಲ ಘಟ್ಟ ಹಾಗೂ ಬಿಜೆಪಿ ಇದ್ದ ಕಾಲ ಘಟ್ಟದಲ್ಲಿನ ಅಭಿವೃದ್ಧಿಯ ತುಲನೆಯನ್ನು ಜನತೆ ಮಾಡಬೇಕು, ಕಾಂಗ್ರೆಸ್ ನವರಿಗೆ ಅಭಿವೃದ್ಧಿ ಬೇಕಿಲ್ಲ. ಹಗರಣಗಳನ್ನೇ ಮಾಡುವ ವ್ಯಕ್ತಿತ್ವ ಕಾಂಗ್ರೆಸ್‌ದ್ದು. ಇಂತಹ ಮನಸ್ಥಿತಿಯುಳ್ಳ ಕಾಂಗ್ರೆಸ್ ಇವತ್ತು ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿನ ವಿಚಾರ ಮಾತನಾಡುತ್ತದೆ. ಅಭಿವೃದ್ಧಿಯೇ ಬೇಡದವರಿಗೆ ಪರಶುರಾಮರ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಅಗತ್ಯ ಕಾಣುತ್ತಿಲ್ಲ. ಹೀಗಾಗಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ಶಿಲ್ಪಿ ಕೃಷ್ಣ ನಾಯ್ಕ್ ರನ್ನೇ ನಿಂದಿಸುವ ಕಾರ್ಯವನ್ನು ಉದಯ ಶೆಟ್ಟಿ ಮಾಡಿದ್ದಾರೆ. ಇದು ಬಹಳ ಆತಂಕ ತರುವ ವಿಚಾರ. ನಮ್ಮ ಅಗ್ರಹಕ್ಕೆ ಜಿಲ್ಲಾಧಿಕಾರಿಗಳು ಸ್ಪಂದಿಸಬೇಕು, ಹೀನ ರಾಜಕೀಯ ಕೊನೆಗಾಣ ಬೇಕು ಎಂದರು.

ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ್ ಹೆಗ್ಡೆ ಮಾತನಾಡಿ ಉಮಿಕಲ್ ಕುಂಜದಲ್ಲಿ ಇದ್ದ ಕೃಷರ್ ನ್ನು ಉಳಿಸಲು ಕಾಂಗ್ರೆಸ್ ಪರಶುರಾಮ ಮೂರ್ತಿ ನಿರ್ಮಾಣಕ್ಕೆ ಅಡ್ಡ ಗಾಲನ್ನು ಹಾಕುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಸಚಿವನಾಗಿದ್ದ ಸಂದರ್ಭದಲ್ಲಿ ಪರಶುರಾಮರ ಮೂರ್ತಿ ನಿರ್ಮಾಣ ಮಾಡಬೇಕು ಎಂಬುದು ಸಚಿವರ ಆಶಯ ಆಗಿತ್ತು. ಉದಯ ಕುಮಾರ್ ಶೆಟ್ಟಿಯವರು ಕಾರ್ಕಳ ಕಾಂಗ್ರೆಸ್‌ಗೆ ಬಂದ ನಂತರ ಕಾರ್ಕಳದಲ್ಲಿ ದ್ವೇಷ ರಾಜಕಾರಣ ಹೆಚ್ಚಾಗಿದೆ. ಸುನಿಲ್‌ ಕುಮಾರ್ ಕಾರ್ಕಳದಲ್ಲಿ 3 ಸಾವಿರ ಕೋಟಿಯಷ್ಟು ಅಭಿವೃದ್ಧಿ ಕಾರ್ಯ ಆಗಿದೆ. ಪರಶುರಾಮ ಥೀಮ್ ಪಾರ್ಕ್ ಗೆ ಮಂಜೂರು ಆದದ್ದು 6.72 ಕೋಟಿ ಮಾತ್ರ ಇದರಲ್ಲಿ ಅವ್ಯವಹಾರ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು. ಉದಯ ಕುಮಾರ್ ಶೆಟ್ಟಿಯವರ ಆಟಾಟೋಪಗಳು ಹೀಗೆ ಮುಂದುವರಿದರೆ ಉದಯ ಕುಮಾರ್ ಶೆಟ್ಟಿಯವರ ಮನೆಗೆ ಮುತ್ತಿಗೆ ಹಾಕುವುದಾಗಿ ತಿಳಿಸಿದರು. ನೀವು ಹೀಗೆ ಬಾಲ ಅಲ್ಲಾಡಿಸಿದ್ರೆ ಬಾಲ ಕಟ್ ಮಾಡುವ ಕಾರ್ಯವನ್ನು ಬಿಜೆಪಿ ಮಾಡುತ್ತದೆ ಎಂದು ಹೇಳಿದರು.

ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ರೇಷ್ಮಾ ಶೆಟ್ಟಿ ನಿರೂಪಿಸಿದರು, ಉದಯ ಕೋಟ್ಯಾನ್ ಧನ್ಯವಾದಗಳನ್ನು ಸಲ್ಲಿಸಿದರು.

- Advertisement -

Related news

error: Content is protected !!