ಪುತ್ತೂರು :ಪುತ್ತೂರು ನಗರಸಭೆ ಕಸ ಸಂಗ್ರಹ ಲಾರಿ ಚಾಲಕನಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಕೊರೊನಾ ಭಯದಿಂದ ಊರಿಗೆ ತೆರಳಲು ಸಿದ್ದವಾದ ಪೌರ ಕಾರ್ಮಿಕರು. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 41 ಪೌರ ಕಾರ್ಮಿಕರು ಊರಿಗೆ ತೆರಳಲು ಸಿದ್ದತೆ ಮಾಡಿ ಕೊಂಡಿದ್ದಾರೆ.ಅವರು ಇಂದು ಮುಂಜಾನೆ ನಗರಸಭಾ ಕಚೇರಿ ಅವರಣದಲ್ಲಿ ಸೇರಿದ್ದರು. ಪಾಸಿಟಿವ್ ಬಂದ ಚಾಲಕನ ಜೊತೆ ಸಂಪರ್ಕ ಇದ್ದರೂ ಕ್ವಾರೆಂಟೈನ್ ಮಾಡಿಲ್ಲ ಅಂತ ಆರೋಪ ಮಾಡಿದ್ದಾರೆ.ಮತ್ತು ನಮಗೆ ಕೆಲಸ ಮಾಡಲು ಭಯವಾಗ್ತಿದೆ ಅಂತ ಆತಂಕ ತೋಡಿಕೊಂಡ ಪೌರ ಕಾರ್ಮಿಕರು.
ಅಲ್ಲಿನ ಪರಿಸ್ಥಿತಿ ಮಾಹಿತಿ ಪಡೆದು ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ,ಊರಿಗೆ ಹೋಗದಂತೆ ಪೌರಕಾರ್ಮಿಕರನ್ನ ತಡೆದು
ನಿಮ್ಮ ಆರೋಗ್ಯ ರಕ್ಷಣೆಗೆ ಬದ್ಧ ಎಂದು ಧೈರ್ಯ ತುಂಬಿದರು .ಹಾಗೂ ಪೌರಕಾರ್ಮಿಕರಿಗೆ ಮಾಸ್ಕ್ ಮತ್ತು ಆರೋಗ್ಯ ರಕ್ಷಣೆ ಸಲಕರಣೆ ವಿತರಣೆ ಮಾಡಿ ಧೈರ್ಯವಾಗಿ ಕೆಲಸ ಮಾಡಿ ಎಂದು ಶಾಸಕರು ಮನವೊಲಿಕೆ ಮಾಡಿದರು.
ಶಾಸಕರ ಭರವಸೆ ಹಿನ್ನೆಲೆ ಮತ್ತೆ ತಮ್ಮ ಕೆಲಸಕ್ಕೆ ತೆರಳಿದ ಪೌರಕಾರ್ಮಿಕರು.