Friday, June 19, 2026
spot_imgspot_img
spot_imgspot_img

ಪಿಯು ಉಪನ್ಯಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಏಳನೇ ದಿನಕ್ಕೆ !

- Advertisement -
- Advertisement -

ಬೆಂಗಳೂರು: ನೇಮಕಾತಿ ಆದೇಶ ಪ್ರತಿಗಾಗಿ ಪಿಯು ಉಪನ್ಯಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಏಳನೇ ದಿನಕ್ಕೆ ಕಾಲಿಟ್ಟಿದೆ. ಕೌನ್ಸಿಲಿಂಗ್ ಆಗಿ ವರ್ಷ ಕಳೆದರೂ ಇನ್ನೂ ಆದೇಶ ಪ್ರತಿ ಅಭ್ಯರ್ಥಿಗಳ ಕೈಗೆ ಸಿಕ್ಕಿಲ್ಲ. ಹೀಗಾಗಿ ಪಟ್ಟು ಬಿಡದೇ ಸರ್ಕಾರದ ವಿರುದ್ಧ ಉಪನ್ಯಾಸಕರು ಧರಣಿ ಕುಳಿತಿದ್ದಾರೆ.

ಕೊರೊನಾ ಹೆಸರಲ್ಲಿ ಸರ್ಕಾರ ಕೌನ್ಸಿಲಿಂಗ್ ಆದೇಶದ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಆದೇಶದ ಪ್ರತಿ ನೀಡದ ಹೊರತು ಸ್ಥಳ ಬಿಟ್ಟು ಕದಲಲ್ಲವೆಂದು ಮಲ್ಲೇಶ್ವರಂನ ಪಿಯು ಬೋರ್ಡ್ ಮುಂಭಾಗ ಧರಣಿ ಮುಂದುವರೆಸಿದ್ದಾರೆ.

- Advertisement -

Related news

error: Content is protected !!