Monday, April 29, 2024
spot_imgspot_img
spot_imgspot_img

ವಿಟ್ಲ : ( ಮಾ.08- ಮಾ.13) ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

- Advertisement -G L Acharya panikkar
- Advertisement -

ವಿಟ್ಲ : ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ದಿನಾಂಕ 08-03-2023ನೇ ಬುಧವಾರದಿಂದ ದಿನಾಂಕ 13-03-2023ನೇ ಸೋಮವಾರದ ವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾ. 8ರಂದು ಬೆಳಗ್ಗೆ ಗಂಟೆ 10ಕ್ಕೆಉಗ್ರಾಣ ಮುಹೂರ್ತ ನಡೆಯಲಿದೆ. ಬಳಿಕ ಆಜೇರು ಪುರುಷೋತ್ತಮ ನಾಯಕ್ ಮಲ್ಯರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.ಸಂಜೆ ಗಂಟೆ 3 ರಿಂದ ಪುಣಚ ಪರಿಯಾಲ್ತಡ್ಕ ಅಶ್ವತ್ಥಕಟ್ಟೆ ವಠಾರದಿಂದ ಹಸಿರುವಾಣಿ (ಹೊರಕಾಣಿಕೆ) ಸಮರ್ಪಣೆ ನಡೆಯಲಿದೆ. ಶ್ರೀರಾಮಚಂದ್ರ ಭಟ್ ಕುಚ್ಚುಚ್ಚಾರು, ಎಣ್ಣೆತ್ತೋಡಿ, ಪುಣಚ, ನಿವೃತ್ತ ಮುಖ್ಯೋಪಾಧ್ಯಾಯರು ಉದ್ಘಾಟಿಸಲಿದ್ದಾರೆ.

ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ಸಂಜೆ ಗಂಟೆ 4.30ರಿಂದ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಸಂಜೆ ಗಂಟೆ 6 ರಿಂದ ದೇವತಾ ಪ್ರಾರ್ಥನೆ, ಆಚಾರ್ಯಾದಿ ಋತ್ವಿಗರಣೆ, ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸಪ್ತಶುದ್ಧಿ , ಪ್ರಾಸಾದ ಶುದ್ಧಿ , ರಾಕ್ಷೋಘ್ನ ಸೂಕ್ತ ಹೋಮ, ಅಸ್ತ್ರ ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಅಂಕುರಾರೋಹಣ, ರಾತ್ರಿ ಪೂಜೆ. ಸಂಜೆ ಗಂಟೆ 5 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

8-3-2023 ನೇ ಬುಧವಾರ ರಾತ್ರಿ ಗಂಟೆ 7 ಕ್ಕೆ ದಾಸ ಸಂಕೀರ್ತನಕಾರ, ಭಜನಾಗ್ರೇಸರ, ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ-ದೇಶ-ಭಕ್ತಿ-ತತ್ವ ಜಾನಪದ ಭಾವಗೀತೆಗಳ “ಗಾನಾಮೃತ ಮಂಜರಿ ” ನಡೆಯಲಿದೆ.

ಮಾ. 9ರಂದು ಬೆಳಿಗ್ಗೆ ಗಂಟೆ 7.30ರಿಂದ ಗಣಪತಿ ಹೋಮ, ಅಂಕುರ ಪೂಜೆ, ಪ್ರಾಯಶ್ಚಿತ್ತ ಹೋಮ, ದ್ವಾರ ಪ್ರಾಯಶ್ಚಿತ್ತ ಹೋಮ, ಕ್ಷಾಳನಾದಿ ಸಪ್ತಶುದ್ಧಿ, ಹೋಮಕಲಶಾಭಿಷೇಕ, ಮಧ್ಯಾಹ್ನ , ಪೂಜೆ ನಡೆಯಲಿದೆ. ಸಂಜೆ ಗಂಟೆ 6 ರಿಂದ ದುರ್ಗಾನಮಸ್ಕಾರ ಪೂಜೆ, ಅಂಕುರ ಪೂಜೆ, ವನದುರ್ಗಾ ಹೋಮ, ರಾತ್ರಿ ಪೂಜೆ ನಡೆಯಲಿದೆ.

ಸಂಜೆ ಗಂಟೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8.30 ಕ್ಕೆ ಶ್ರೀ ವಿಠಲ ನಾಯಕ್ ಕಲ್ಲಡ್ಕ ಇವರಿಂದ ವಿನೂತನ ಶೈಲಿಯ ಕಾರ್ಯಕ್ರಮ ’ಗೀತಾ ಸಾಹಿತ್ಯ ಸಂಭ್ರಮ’ ಸಂದೇಶದ ಸಂತೋಷ ನಡೆಯಲಿದೆ.

ಮಾ. 10ರಂದು ಬೆಳಿಗ್ಗೆ ಗಂಟೆ 7.30 ರಿಂದ ಗಣಪತಿ ಹೋಮ, ಅಂಕುರ ಪೂಜೆ, ಶಾಂತಿ ಹೋಮ, ಶ್ವಶಾಂತಿ ಹೋಮ, ಚೋರ ಶಾಂತಿ ಹೋಮ, ಅದ್ಬುತ ಶಾಂತಿ ಹೋಮ, ಹೋಮಕಲಶಾಭಿಷೇಕ ಮಧ್ಯಾಹ್ನ ಪೂಜೆ ನಡೆಯಲಿದೆ. ಸಂಜೆ ಗಂಟೆ 6 ರಿಂದ ಅಂಕುರ ಪೂಜೆ, ದುರ್ಗಾನಮಸ್ಕಾರ ಪೂಜೆ, ಆಶ್ಲೇಷಾ ಬಲಿ, ರಾತ್ರಿ ಪೂಜೆ ನಡೆಯಲಿದೆ. ಸಂಜೆ ಗಂಟೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 10 ರಿಂದ 12.30ರ ವರೆಗೆ ಶ್ರೀಮತಿ ಶ್ರದ್ದಾ ಭಟ್ ನಾರ್ಯಪಳ್ಳ ಮತ್ತು ಬಳಗದವರಿಂದ “ಹರಿಕಥೆ”, ರಾತ್ರಿ ಗಂಟೆ 8.30 ರಿಂದ ಸಚಿವರನ್ನೇ ಮಾಯ ಮಾಡಿದ ಮಾಂತ್ರಿಕ ಮೆಗಾ ಮ್ಯಾಜಿಕ್ ಸ್ಟಾರ್‍ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ಮಸ್ತ್ ಮ್ಯಾಜಿಕ್ ಅದ್ಭುತ-ಹಾಸ್ಯಮಯ-ವಿನೂತನ ಜಾದೂ ನಡೆಯಲಿದೆ.

ಮಾ. 11 ರಂದು ಬೆಳಿಗ್ಗೆ ಗಂಟೆ 7.30 ರಿಂದ ಅಂಕುರ ಪೂಜೆ, 108 ತೆಂಗಿನಕಾಯಿ ಗಣಪತಿ ಹೋಮ, ಚಂಡಿಕಾ ಹೋಮ, ಮಧ್ಯಾಹ್ನ ಪೂಜೆ ನಡೆಯಲಿದೆ. ಬಳಿಕ ಸಂಜೆ ಗಂಟೆ 6 ರಿಂದ ಬ್ರಹ್ಮಕಲಶ ಮಂಟಪ ಸಂಸ್ಕಾರ, ಕಲಶ ಮಂಡಲ ರಚನೆ, ಅಂಕುರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ಸಂಜೆ ಗಂಟೆ 6.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಗಂಟೆ 10 ರಿಂದ 12.30ರ ವರೆಗೆ “ಯಕ್ಷಶ್ರೀ” ಹವ್ಯಾಸಿ ಬಳಗ, ರಾಮಕುಂಜ ತಂಡದಿಂದ ತಾಳಮದ್ದಳೆ, ರಾತ್ರಿ ಗಂಟೆ 8.30 ರಿಂದ ಅಮ್ಮ ಕಲಾವಿದೆರ್‍, ಕಡ್ಲ ಅಭಿನಯಿಸುವ ಪರಕೆ ಪೂವಕ್ಕೆ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಮಾ. 12 ರಂದು ಬೆಳಿಗ್ಗೆ ಗಂಟೆ 7.30 ರಿಂದ ಗಣಪತಿ ಹವನ, ಅಂಕುರ ಪೂಜೆ, ಕುಂಭೇಶ ಕರ್ಕರೀ ಪೂಜೆ, ಅಗ್ನಿ ಜನನ, ತತ್ವಹೋಮ, ತತ್ವಕಲಶ, ಮದ್ಯಾಹ್ನ ಪೂಜೆ, ಸಂಜೆ ಗಂಟೆ 4.30 ರಿಂದ ದ್ರವ್ಯಕಲಶ ಪೂರಣೆ, ಬ್ರಹ್ಮಕಲಶ ಪೂರಣೆ, ಪರಿಕಲಶ ಪೂರಣೆ, ಬ್ರಹ್ಮಕಲಶ ಪೂಜೆ, ಪರಿವಾರ ದೇವರ ಕಲಶ ಪೂರಣೆ, ಅಧಿವಾಸ ಬಲಿ, ಬ್ರಹ್ಮಕಲಶ ಅಧಿವಾಸ, ದುರ್ಗಾನಮಸ್ಕಾರ ಪೂಜೆ, ರಾತ್ರಿ ಪೂಜೆ ನಡೆಯಲಿದೆ. ಸಂಜೆ ಗಂಟೆ 4.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಬೆಳಿಗ್ಗೆ ಗಂಟೆ 10 ರಿಂದ 12.30ರ ವರೆಗೆ ಶ್ರೀ ಮಹಿಷಮರ್ದಿನಿ ಯಕ್ಷವೃಂದ ಪುಣಚ ಇವರಿಂದ “ಭಕ್ತ ಸುಧನ್ವ” ತಾಳಮದ್ದಳೆ ನಡೆಯಲಿದೆ. ರಾತ್ರಿ ಗಂಟೆ 8.30 ರಿಂದ ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ, ಶ್ರೀ ಹನುಮಗಿರಿ ಮೇಳ ಇವರಿಂದ ಪೌರಾಣಿಕ ಯಕ್ಷಗಾನ ಕಥಾಪ್ರಸಂಗ ’ತ್ರಿಜನ್ಮ ಮೋಕ್ಷ’ ನಡೆಯಲಿದೆ.

ಮಾ. 13 ರಂದು ಬೆಳಿಗ್ಗೆ ಗಂಟೆ 7.30 ರಿಂದ ಮಹಾಗಣಪತಿ ಹವನ, ಧ್ವಜಾರೋಹಣ, ಪರಿವಾರ ದೇವರಿಗೆ ಕಲಶಾಭಿಷೇಕ, 10-45 ರ ವೃಷಭ ಲಗ್ನದ ಸುಮುಹೂರ್ತದಲ್ಲಿ ಶ್ರೀ ಮಹಿಷಮರ್ದಿನಿ ದುರ್ಗೆಗೆ ದ್ರವ್ಯ ಕಲಶಾಭಿಷೇಕ ಸಹಿತ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7 ಕ್ಕೆ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಧ್ವಜಾವರೋಹಣ ನಡೆಯಲಿದೆ. ಸಂಜೆ ಗಂಟೆ 5.30 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8.30 ಕ್ಕೆ ವಿಜಯಕುಮಾರ್‍ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ’ಕಲಾಸಂಗ ’ ಕಲಾವಿದರು ಮಂಗಳೂರು ಇವರಿಂದ ತುಳು ರಂಗಭೂಮಿಯಲ್ಲಿ ಚಾರಿತ್ರಿಕ ದಾಖಲೆ ನಿರ್ಮಿಸಿದ ಸ್ವರಾಜ್ ಶೆಟ್ಟಿ ಅಭಿನಯಿಸುವ ವಿಭಿನ್ನ ಶೈಲಿಯ “ಶಿವದೂತೆ ಗುಳಿಗೆ” ತುಳು ನಾಟಕ ನಡೆಯಲಿದೆ.

- Advertisement -

Related news

error: Content is protected !!