Monday, March 24, 2025
spot_imgspot_img
spot_imgspot_img

ಬಿಜೆಪಿ ಸಮಾವೇಶದಲ್ಲಿ ಮಾಜಿ ಶಾಸಕರು ಸೇರಿದಂತೆ ಹಲವರ ಪರ್ಸ್ ಕಳ್ಳತನ: 13 ಆರೋಪಿಗಳ ಬಂಧನ

- Advertisement -
- Advertisement -

ಲೋಕಸಭಾ ಚುನಾವಣೆ ನಿಮಿತ್ತ ಮಾರ್ಚ್ 27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಕುಶಾಲನಗರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿದ್ದರು. ಈ ವೇಳೆ ನೂರಾರು ಸಂಖ್ಯೆ ಕಾರ್ಯಕರ್ತರು, ಮುಖಂಡರು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೊಂಚ ಗದ್ದಲವಾಗಿತ್ತು. ಇದನ್ನೇ ಕಾಯುತ್ತಿದ್ದ ಖದೀಮರು ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ‌ ಬೋಪಯ್ಯ ಸೇರಿದಂತೆ ಇತರೆ ಬಿಜೆಪಿ ಮುಖಂಡರ ಪರ್ಸ್‌ ಕಳ್ಳತನ ಮಾಡಿದ್ದರು.

ಈ ಬಗ್ಗೆ ದೂರು ದಾಖಲಿಸಿಕೊಂಡು ಕಾರ್ಯಚರಣೆಗಿಳಿದಿದ್ದ ಕೊಡಗು ಜಿಲ್ಲಾ ಪೊಲೀಸರು ಒಟ್ಟು 13 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಶಿವಮೊಗ್ಗ, ಭದ್ರಾವತಿ, ನೆಲಂಮಂಗಲ ಮೂಲದವರು ಎಂದು ತಿಳಿದುಬಂದಿದ್ದು, ಇವರಿಂದ ಎರಡು ಕಾರು, 12 ಮೊಬೈಲ್, 65,900 ರೂ. ನಗದು ಹಣ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಸಭೆ ವೇಳೆ ಮೈಸೂರು ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವಾಗ ಬೇಕಂತಲೇ ನೂಕು ನುಗ್ಗಲು ಸೃಷ್ಟಿಸಿ ಹಲವರ ಪರ್ಸ್ ಎಗರಿಸಿದ್ದರು. ಮೊದಲೇ ಪ್ಲ್ಯಾನ್ ಮಾಡಿಕೊಂಡು ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿತ್ತು.

- Advertisement -

Related news

error: Content is protected !!