Sunday, June 29, 2025
spot_imgspot_img
spot_imgspot_img

ಪುತ್ತೂರಿನ ಪ್ರತಿಷ್ಠಿತ ಕ್ಲಬ್ ಗೆ ಪೊಲೀಸರ ದಾಳಿ-15 ಜನರಬಂಧನ

- Advertisement -
- Advertisement -

ಪುತ್ತೂರು(ಅ.26): ಪುತ್ತೂರಿನ ಪ್ರತಿಷ್ಠಿತ ಕ್ಲಬ್ ಒಂದಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಅ .25 ರ ರಾತ್ರಿ ದಾಳಿ ನಡೆಸಿದ್ದು ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟದಲ್ಲಿ ನಿರತರಾಗಿದ್ದ 15 ಜನರನ್ನು ಬಂಧಿಸಿದ್ದಾರೆ. ಪುತ್ತೂರಿನ ಮಾರ್ಕೆಟ್ ರಸ್ತೆಯ ಮೀನು ಮಾರುಕಟ್ಟೆ ಸಮೀಪದ ಕ್ಲಬ್ ಗೆ ಪುತ್ತೂರು ಎ.ಎಸ್.ಪಿಯವರ ನಿರ್ದೇಶನದಂತೆ ಪುತ್ತೂರು ನಗರ ಠಾಣೆ ಇನ್ಸ್’ಪೆಕ್ಟರ್ ಗೋಪಾಲ ನಾಯ್ಕ ರವರ ನೇತ್ರತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.

ಕ್ಲಬ್ ನೊಂದಾಯಿತ ಕ್ಲಬ್ ಆಗಿದ್ದರೂ ಅಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕಾನೂನು ಬಾಹಿರವಾಗಿ ಒಂದಷ್ಟು ಮಂದಿ ಇಸ್ಪಿಟ್ ಆಟದಲ್ಲಿ ನಿರತರಾಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದ್ದು, ಜೂಜಾಟದಲ್ಲಿ ತೊಡಗಿಸಿದ್ದಾರೆ ಎನ್ನಲಾದ ಸುಮಾರು 1.5 ಲಕ್ಷ ರೂಪಾಯಿಯಷ್ಟು ಹಣವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!