Sunday, July 5, 2026
spot_imgspot_img
spot_imgspot_img

ಪುತ್ತೂರು ಬಿಜೆಪಿಯಲ್ಲಿ ಮಹತ್ವದ ಬದಲಾವಣೆ…!

- Advertisement -
- Advertisement -

ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು ಹಾಗೂ ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್ ಪರ್ಲಡ್ಕ

ಪುತ್ತೂರು ನಗರ ಮಂಡಲ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು ಹಾಗೂ ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್ ಪರ್ಲಡ್ಕ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಪುತ್ತೂರು ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ರವರು ನೇಮಕ ಮಾಡಿದ್ದಾರೆ.

ನೂತನ ಪದಾಧಿಕಾರಿಗಳ ನೇಮಕವನ್ನು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಿದ್ದು, ಇದರಿಂದ ಸಂಘಟನೆಗೆ ಮತ್ತಷ್ಟು ಬಲ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಕ್ತಾರರಾಗಿ ರಾಜೇಶ್ ಬನ್ನೂರು ಪಕ್ಷದ ಅಧಿಕೃತ ನಿಲುವುಗಳನ್ನು ಸಾರ್ವಜನಿಕರ ಮುಂದೆ ಪರಿಣಾಮಕಾರಿಯಾಗಿ ಮಂಡಿಸಲಿದ್ದು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್ ಪರ್ಲಡ್ಕ ಪತ್ರಿಕಾ ಸಮನ್ವಯ ಹಾಗೂ ಮಾಹಿತಿ ಪ್ರಸಾರದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.

- Advertisement -

Related news

error: Content is protected !!