- Advertisement -
- Advertisement -
ಪುತ್ತೂರು: ಮಂಗಳೂರು ಕಡೆ ಚಲಿಸುತ್ತಿದ್ದ ಮಿನಿ ಬಸ್ ವೊಂದು ನಿಯಂತ್ರಣ ತಪ್ಪಿ ರಸ್ತೆಯ ಅಂಚಿನ ಪ್ರಪಾತಕ್ಕೆ ವಾಲಿದ ಮತ್ತು ರಸ್ತೆ ಬದಿಯ ತಡೆ ಬೇಲಿಯಿಂದಾಗಿ ಅದೃಷ್ಟವಶಾತ್ ಅನಾಹುತವೊಂದು ತಪ್ಪಿದ ಘಟನೆ ಪುತ್ತೂರು ಬೈಪಾಸ್ ರಸ್ತೆ, ಬೊಳುವಾರಿನಲ್ಲಿ ನಡೆದಿದೆ.
ಕಾರ್ಯಕ್ರಮದ ನಿಮಿತ್ತ ಬೈಪಾಸ್ ಮಾರ್ಗವಾಗಿ ಮಂಗಳೂರು ಕಡೆ ಹೋಗುತ್ತಿರುವ ಮಿನಿ ಬಸ್ ಬೈಪಾಸ್ ರಸ್ತೆಯ ಬೊಳುವಾರು ಮಂಜಲ್ಪಡ್ಪು ಮಧ್ಯೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಪ್ರಪಾತಕ್ಕೆ ವಾಲಿದೆ, ರಸ್ತೆ ಬದಿಯಲ್ಲಿದ್ದ ತಡೆ ಬೇಲಿಗೆ ಡಿಕ್ಕಿಯಾಗಿ ನಿಂತಿದೆ. ಘಟನೆಯಿಂದಾಗಿ ಮಿನಿ ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
- Advertisement -