Sunday, June 7, 2026
spot_imgspot_img
spot_imgspot_img

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಂಸದರ ಬಗ್ಗೆ ಅವ್ಯಾಚ್ಯ ಶಬ್ಧಗಳಿಂದ ನಿಂದನೆ

- Advertisement -
- Advertisement -

ಅವಿನಾಶ್‌‌ ಜೋಗಿ ವಿರುದ್ದ ಸಂಪ್ಯ ಪೊಲೀಸ್ ಠಾಣೆಗೆ ದೂರು…!

ಪುತ್ತೂರು: ವ್ಯಾಟ್ಸಾಪ್‌ ಗ್ರೂಪ್‌ ಸಾಮಾಜಿಕ ಜಾಲತಾಣದಲ್ಲಿ ನಿಕಟಪೂರ್ವ ಸಂಸದ ನಳಿನ್‌ ಕುಮಾರ್‌ ಕಟೀಲ್‌ರವರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ವಾಯ್ಸ್‌ ಮೇಸೇಜ್‌ನ್ನು ಕಳುಹಿಸಿದ ಬಗ್ಗೆ ಪಿ. ನವೀನ್‌ ಕುಮಾರ್‌‌ ರೈ ಎಂಬವರು ಅವಿನಾಶ್‌‌ ಜೋಗಿ ಎಂಬವರ ವಿರುದ್ಧ ಸಂಪ್ಯ ಗ್ರಾಮಾಂತರ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

ಪುತ್ತೂರು ತಾಲೂಕು ಇಂದಿರಾನಗರ ನಿವಾಸಿ ಅವಿನಾಶ್‌‌ ಪುರುಷರಕಟ್ಟೆ ಇವರು ಸಾಮಾಜಿಕ ಜಾಲತಾಣದಲ್ಲಿ ನಾನು ಅವಿನಾಶ್, ಅರುಣ್ ಕುಮಾರ್ ಪುತ್ತಿಲನಿಗೆ ಜೈ, ನಳಿನ್ ಕುಮಾರ್ ಕಟೀಲ್ ಫಕ್ ಎಂದು ಹೇಳಿ, ಅರುಣ್ ಕುಮಾರ್ ಪುತ್ತಿಲ ಕೆಲಸ ಮಾಡಿದಷ್ಟು ನಳಿನಿಅಕ್ಕ ಎಂದು ಸಂಬೋಧಿಸಿ ಕೆಲಸ ಮಾಡಿದರೆಯೇ ಎಂದು ಹೀನಾಯವಾಗಿ ಮಾತನಾಡುತ್ತಿದ್ದಾನೆ. ನನಗೆ ಅರುಣಣ್ಣನೇ ಹೀರೋ ಎಂದು ಹೇಳಿರುತ್ತಾನೆ. ಹಾಗೂ ನಳಿನ್ ಕುಮಾರ್ ಲಾಟ್ ಪೋಟ್ ಎಂದು ಹೇಳಿ ಹೀಯಾಳಿಸಿರುತ್ತಾನೆ. ಇದನ್ನು ನಳಿನ್ ಕುಮಾರ್ ಕಟೀಲ್ ಇವರ ಗ್ರೂಪ್‌ಗೆ ಹಾಕಿ ನಳಿನ್ ಕುಮಾರ್ ಕಟೀಲ್‌ರವರಿಗೆ ತಿಳಿಸಿ, ಆತ ನನ್ನ ಎಂದು ಹೇಳಿ ಸಾಮಾಜಿಕ ಜಾಲತಾಣದಲ್ಲಿ ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಇವರನ್ನು ಅವ್ಯಾಚ್ಯಶಬ್ದಗಳಿಂದ ನಿಂದಿಸಿ ವಾಯ್ಸ್ ಮೆಸೇಜ್‌ನ್ನು ನಿರಂತರವಾಗಿ ಕಳುಹಿಸುತ್ತಿರುವ ವಿಚಾರ ನನ್ನ ಗಮನಕ್ಕೆ ನನ್ನ ಫೋನ್ ಮೂಲಕ ತಿಳಿದಿರುತ್ತದೆ. ಈ ಬಗ್ಗೆ ತಮ್ಮ ಗಮನಕ್ಕೆ ವಾಯ್ಸ್ ರೆಕಾರ್ಡ್‌ನ್ನು ತೋರಿಸಲು ನಾನು ಬದ್ಧನಿದ್ದೇನೆ ಎಂದು ಪಿ. ನವೀನ್‌ ಕುಮಾರ್‌‌ ರೈ ದೂರಿನಲ್ಲಿ ತಿಳಿಸಿದ್ದಾರೆ. ಅವಿನಾಶ್‌‌ ಜೋಗಿ ವಿರುದ್ಧ ಈ ಮೊದಲೇ ಹಲವು ಪ್ರಕರಣಗಳು ಕೋರ್ಟ್‌ಗಳಲ್ಲಿ ಇದ್ದು, ರೌಡಿಶೀಟರ್ ಆಗಿರುತ್ತಾನೆ.

ಆದುದರಿಂದ ದಯಮಾಡಿ ಈ ವಿಚಾರದಲ್ಲಿ ಅವಿನಾಶ್‌‌ ಜೋಗಿ ಎಂಬವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿ. ನವೀನ್‌ ಕುಮಾರ್‌‌ ರೈರವರು ಈ ಮೂಲಕ ಸಂಪ್ಯ ಗ್ರಾಮಾಂತರ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!