Tuesday, July 1, 2025
spot_imgspot_img
spot_imgspot_img

ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆ ಉದ್ಘಾಟಿಸಿದ ನಟ ರಮೇಶ್ ಅರವಿಂದ್

- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ಆಭರಣ ಮಳಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಇದರ ನವೀಕೃತ ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ನಟ, ಮುಳಿಯ ಸಂಸ್ಥೆಯ ನೂತನ ರಾಯಭಾರಿ ರಮೇಶ್ ಅರವಿಂದ್ ಆಗಮಿಸಿದರು.

ಬೆಳಗ್ಗೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಆನಂತರ ದೇವರ ದೀಪದೊಂದಿಗೆ ಮೆರವಣಿಗೆ ಮೂಲಕ ಕೋರ್ಟ್ ರಸ್ತೆಯಲ್ಲಿರುವ ಶೋರೂಂಗೆ ಬಂದು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

1944 ರಲ್ಲಿ ಪ್ರಾರಂಭಗೊಂಡ ಮುಳಿಯ ಜ್ಯುವೆಲ್ಸ್, ಪುತ್ತೂರಿನಲ್ಲಿ 10000 ಚದರ ಅಡಿಯ ವಿಶಾಲ ಶೋರೂಂ ಅನ್ನು ತೆರೆಯಲಾಗಿದೆ. ನಾಲ್ಕು ಅಂತಸ್ತಿನಲ್ಲಿ ಚಿನ್ನ, ಬೆಳ್ಳಿ, ವಜ್ರ, ಆಧುನಿಕ ಬ್ರಾಂಡೆಡ್ ವಾಚುಗಳು, ಗಿಫ್ಟ್ ಐಟಂ, ಚಿನ್ನಾಭರಣಗಳ ಕೌಂಟರ್‌ಗಳನ್ನು ಹೊಂದಿರಲಿವೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಂಬಂತೆ ಗ್ರಾಹಕರಿಗೆ ಮಳಿಗೆಯಲ್ಲೇ ಉಚಿತ ಊಟ, ಉಪಾಹಾರಗಳನ್ನು ಆರಂಭಿಸಲಾಗಿದೆ.

ಮಧ್ಯಾಹ್ನ 12 ರಿಂದ 2.30 ರ ಒಳಗೆ ಆಭರಣ ಖರೀದಿಗೆ ಬರುವ ಗ್ರಾಹಕರಿಗೆ ಊಟ, ಸಂಜೆ 4 ರಿಂದ 6.30 ರ ಒಳಗೆ ಬರುವವರಿಗೆ ಉಪಾಹಾರ ವ್ಯವಸ್ಥೆ ಇರಲಿದೆ. ಜತೆಗೆ ಮಕ್ಕಳ ಆಟ, ಆರೈಕೆಗೆ ವಿಶೇಷ ಕೊಠಡಿ, ವ್ಯಾಲೆಟ್ ಪಾರ್ಕಿಂಗ್, ವಾಚ್ ಕೌಂಟ ರ್, ಬೆಳ್ಳಿಯ ಆಭರಣಗಳ ಸಿಲ್ವರಿಯ ಕೌಂಟರ್, ವಜ್ರಾಭರಣ ಅಮೂಲ್ಯ ಕೌಂಟರ್, ಗೋಲ್ಡ್‌ ಪ್ಯೂರಿಟಿ ಅನಲೈಸರ್ ಹಾಗೂ ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಷನ್ ಸೌಲಭ್ಯಗಳಿವೆ.

- Advertisement -

Related news

error: Content is protected !!