- Advertisement -
- Advertisement -
ಪುತ್ತೂರು: ಬೈಕ್ ಮತ್ತು ಕಾರು ನಡುವೆ ಡಿಕ್ಕಿ ಸಂಭವಿಸಿದ , ಬೈಕ್‌ನಲ್ಲಿದ್ದ ದಂಪತಿ, ಮಗು ಗಾಯಗೊಂಡ ಘಟನೆ ದರ್ಬೆಯಲ್ಲಿ ನಡೆದಿದೆ.

ಬೈಕ್ ಸವಾರ ಪಡುವನ್ನೂರು ಗ್ರಾಮದ ಅಬ್ದುಲ್ ರಹಿಮಾನ್, ಅವರ ಪತ್ನಿ ಸೌಧ, 2 ವರ್ಷದ ಮಗು ಲುಕ್ಮಾನ್ ಗಾಯಾಳುಗಳು. ಅಬ್ದುಲ್ ರಹಿಮಾನ್ ಅವರು ರಸ್ತೆ ಬದಿಯಿಂದ ಮುಖ್ಯರಸ್ತೆಗೆ ಏಕಾಏಕಿ ಹೋದಾಗ ಕೆಮ್ಮಿಂಜೆ ಕಡೆ ಜಗದೀಶ್ ಎಂಬವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ದಂಪತಿ, ಮಗು ರಸ್ತೆಗೆ ಬಿದ್ದು ಗಾಯವಾಗಿದೆ. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


- Advertisement -








