Tuesday, June 16, 2026
spot_imgspot_img
spot_imgspot_img

ಪುತ್ತೂರು ಕಾಲೇಜು ವಿದ್ಯಾರ್ಥಿನಿಗೆ ಚೂರಿ ಇರಿತ ಹೈಡ್ರಾಮ ಪ್ರಕರಣ

- Advertisement -
- Advertisement -

ವಿದ್ಯಾರ್ಥಿಯ ಮನೆಗೆ ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಮತ್ತು ಪದಾಧಿಕಾರಿಗಳು ಭೇಟಿ

ಪುತ್ತೂರಿನ ಸರಕಾರಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿಯೊಬ್ಬ ಚೂರಿ ಇರಿದಿದ್ದಾನೆಂಬ ಸುದ್ದಿ ಹಬ್ಬಿತ್ತು. ಘಟನೆ ನಡೆದ ಕೆಲ ಹೊತ್ತು ಪುತ್ತೂರಿನಲ್ಲಿ ಪಕ್ಷುಬ್ದ ವಾತವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಪುತ್ತೂರು ನಗರ ಪೋಲಿಸ್‌ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೋಲಿಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದರು. ಸಂಜೆಯಾಗುತ್ತಲೆ ಪೋಲಿಸ್ ತನಿಖೆಯಿಂದ ಸತ್ಯಾಂಶ ಹೊರಬಂದಿದ್ದು ವಿದ್ಯಾರ್ಥಿನಿ ಕಟ್ಟು ಕಥೆ ಸೃಷ್ಟಿ ಮಾಡಿದ್ದಾಳೆಂದು ಎಂದು ತಿಳಿದು ಬಂದಿದೆ.

ಇಂದು ವಿದ್ಯಾರ್ಥಿಯ ಮನೆಗೆ ಪುತ್ತೂರು ಬಿಜೆಪಿ ಮಂಡಲ ಅದ್ಯಕ್ಷರಾದ ದಯಾನಂದ ಶೆಟ್ಟಿ ಮತ್ತು ಪದಾಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗೆ ಮತ್ತು ಹೆತ್ತವರ ಜೊತೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಈ ಸಂದರ್ಭದಲ್ಲಿ ಅದ್ಯಕ್ಷರು ದಯಾನಂದ ಶೆಟ್ಟಿ ಉಜಿರೆಮಾರ್, ಉಪಾದ್ಯಕ್ಷರು ಹರಿಪ್ರಸಾದ್ ಯಾದವ್, ಜಿಲ್ಲಾ ಸ್ಟ ಮೋರ್ಚಾ ಅದ್ಯಕ್ಷರು ಹರೀಶ್ ಬಿಜಾತ್ರೆ, ಮಂಡಲ ಪ್ರಧಾನ ಕಾರ್ಯದರ್ಶಿ ನಿತೇಶ ಶಾಂತಿವನ, ಕಿರಣ್ ಬಲ್ನಾಡು ,ವಿಟ್ಲ ಮಹಾ ಶಕ್ತಿ ಕೇಂದ್ರದ ಅದ್ಯಕ್ಷ ಉದಯ ಅಲಂಗಾರು, ಪ್ರಧಾನ ಕಾರ್ಯದರ್ಶಿ ಹರೀಶ್ ಸಿ.ಎಚ್, ಶ್ರೀಕೃಷ್ಣ ವಿಟ್ಲ ಉಪಸ್ಥಿತರಿದ್ದರು.

- Advertisement -

Related news

error: Content is protected !!