Monday, June 8, 2026
spot_imgspot_img
spot_imgspot_img

ಪುತ್ತೂರು: ಹಾಡಹಗಲು ಮನೆಗೆ ನುಗ್ಗಿ ಚಿನ್ನಾಭರಣ ಕಳವು

- Advertisement -
- Advertisement -

ಪುತ್ತೂರು: ಹಾಡುಹಗಲು ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ ಘಟನೆ ಪುತ್ತೂರು ನೆಹರುನಗರ ಸಿಟಿಗುಡ್ಡೆಯಲ್ಲಿ ಅ.12ರ ನಡೆದಿದೆ.

ಸಿಟಿಗುಡ್ಡೆ ನಿವಾಸಿ ಮೋಹನ್ ಆಚಾರ್ಯ ಅವರ ಮನೆಯಿಂದ ಸುಮಾರು 3 ಪವನ್ ಚಿನ್ನಾಭರಣ ಕಳವಾಗಿದೆ.ಮೋಹನ್ ಆಚಾರ್ಯ ಮನೆಮಂದಿ ಅ.12ರಂದು ಬೆಳಗ್ಗೆ, ಪೊಳಲಿ ದೇವಸ್ಥಾನಕ್ಕೆ ಹೋಗಿದ್ದರು. ದೇವಸ್ಥಾನದಿಂದ ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಕಳವಾಗಿರುವುದು ಬೆಳಕಿಗೆ ಬಂದಿದೆ

ಕಳ್ಳರು ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಮಾಡಿಟ್ಟಿದ್ದ ಸಜ್ಜಿಗೆಯನ್ನೂ ತಿಂದು ಹೋಗಿದ್ದಾರೆಂದು ತಿಳಿದು ಬಂದಿದೆ. ಅ.13ರಂದು ಪೊಲೀಸರು ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!