Sunday, June 29, 2025
spot_imgspot_img
spot_imgspot_img

ಪುತ್ತೂರು: ಮಾದಕ ಪದಾರ್ಥ ಸೇವಿಸಿ ಅಸಭ್ಯ ವರ್ತನೆ; ಇಬ್ಬರ ಬಂಧನ..!

- Advertisement -
- Advertisement -

ಪುತ್ತೂರು: ಮಾದಕ ಪದಾರ್ಥ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿಕ್ಕಮುಟ್ನೂರು ಗ್ರಾಮದ ಸಾಲ್ಮರದಲ್ಲಿ ನಡೆದಿದೆ.

ಬಂಧಿತರನ್ನು ಮಹಮ್ಮದ್ ಇಬಾಶ್ (19) ಮತ್ತು ಅಹಮ್ಮದ್ ಇಚಾಝ್ (27) ಎಂದು ಗುರುತಿಸಲಾಗಿದೆ.

ನಗರ ಪೊಲೀಸರು ರೌಂಡ್ಸ್ ನಲ್ಲಿದ್ದಾಗ ಸಾರ್ವಜನಿಕರ ಮಾಹಿತಿ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ ಇವರಿಬ್ಬರು ಮಾದಕ ಪದಾರ್ಥ ಸೇವಿಸಿರುವುದು ಬೆಳಕಿಗೆ ಬಂದಿದೆ. ಇದೀಗ ಇವರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

- Advertisement -

Related news

error: Content is protected !!