Sunday, June 29, 2025
spot_imgspot_img
spot_imgspot_img

ಪುತ್ತೂರು: ಸೋಷಿಯಲ್‌ ಮಿಡೀಯಾದಲ್ಲಿ ಬಂದ ಜಾಹಿರಾತು ನಂಬಿ ಹಣ ಇನ್‌ವೆಸ್ಟ್‌ಮೆಂಟ್; ಲಕ್ಷಾಂತರ ರೂ. ಕಳೆದುಕೊಂಡ ವ್ಯಕ್ತಿ..!

- Advertisement -
- Advertisement -

ಪುತ್ತೂರು: ವ್ಯಕ್ತಿಯೋರ್ವರಿಗೆ ಫೇಸ್‌ಬುಕ್‌ನಲ್ಲಿ ಟ್ರೆಂಡಿಗ್‌ನಲ್ಲಿ ಇನ್‌ವೆಸ್ಟ್‌ ಮಾಡುವ ಮೂಲಕ ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಪ್ರಕರಣ ದಾಖಲಾಗಿದೆ.

ಪುತ್ತೂರು ನಿವಾಸಿ ಜಾನ್ ಪ್ರವೀಣ್ ಮಾಡ್ತಾ (46) ಎಂವರು ಫೇಸ್‌ಬುಕ್‌ನಲ್ಲಿ ಟ್ರೆಂಡಿಗ್‌ ಬಗ್ಗೆ ಬಂದ ಜಾಹಿರಾತಿನಲ್ಲಿದ್ದ ಲಿಂಕ್ ಮೂಲಕ Accel S tudent Group C851 ಎಂಬ ವಾಟ್ಸ್‌ಆಪ್‌ ಗ್ರೂಪ್‌ಗೆ Join ಆಗಿದ್ದು, ವಾಟ್ಸಾಪ್ ಗ್ರೂಪ್ ನಿಂದ ಟ್ರೆಂಡಿಗ್‌ ಬಗ್ಗೆ ಮಾಹಿತಿ ಕಳುಹಿಸಿರುತ್ತಾರೆ. ಅದರಂತೆ ACVVL online APP ನ್ನು Install ಮಾಡಿದ್ದು, ನಂತರ ACVVL online App ನಲ್ಲಿ ಹಣ ಇನ್ವೆಸ್ಟ್ಮೆಂಟ್‌ ಮಾಡಲು ಹೇಳಿ ಅವರು ವಿವಿಧ ಬ್ಯಾಂಕ್ ಖಾತೆಗಳನ್ನುನೀಡಿರುತ್ತಾರೆ. ಆ ಬ್ಯಾಂಕ್ ಖಾತೆಗಳಿಗೆ ಪ್ರವೀಣ್‌ ಹಾಗೂ ಅವರ ಪತ್ನಿಯ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಅದರಲ್ಲಿ ರೂ.21,000/- ಹಣ ವಾಪಾಸ್ ಬಂದಿದ್ದು, APP ನಲ್ಲಿ ವ್ಯಕ್ತಿ ಇನ್ವೆಸ್ಟ್ಮೆಂಟ್‌ ಮಾಡಿದ ಹಣ Display ಯಲ್ಲಿ ತೋರಿಸುತ್ತಿದ್ದರಿಂದ ಹಣ ಹಾಕಿದ್ದು, ನಂತರ ಯಾವುದೇ ಹಣ ವಾಪಾಸ್ ಬಂದಿರುವುದಿಲ್ಲ.

ಫೇಸ್‌ಬುಕ್‌ ನಲ್ಲಿ ಟ್ರೆಂಡಿಗ್‌ ಬಗ್ಗೆ ಬಂದ ಜಾಹಿರಾತು ನೋಡಿ ರೂ.22,35,000/- ಹಣ ಇನ್ವೆಸ್ಟ್ಮೆಂಟ್‌ ಮಾಡಿ ಮೋಸ ಹೋಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅ.ಕ್ರ: 26/2024 ಕಲಂ: 66 (C) 66 (D) IT Act ರಂತೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!