Friday, April 19, 2024
spot_imgspot_img
spot_imgspot_img

ಪುತ್ತೂರು: ಜೆ. ಇ. ಇ ಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ; ಪ್ರೀತಂ ಗೆ ರಾಷ್ಟ್ರ ಮಟ್ಟದಲ್ಲಿ 852ನೇ ರ‍್ಯಾಂಕ್

- Advertisement -G L Acharya panikkar
- Advertisement -

ಪುತ್ತೂರು: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸುವ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಉತ್ತಮ ರ‍್ಯಾಂಕ್ ಗಳನ್ನು ಪಡೆದು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ. ನಾಲ್ಕು ಹಂತಗಳ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಅಂಕಗಳನ್ನು ಪರಿಗಣಿಸಿ ಪ್ರಕಟಿಸಲಾದ ಫಲಿತಾಂಶದಲ್ಲಿ ಪ್ರೀತಂ.ಜಿ ರಾಷ್ಟ್ರಮಟ್ಟದಲ್ಲಿ 852 ನೇ ರ‍್ಯಾಂಕ್ ಗಳಿಸಿದ್ದಾರೆ.


ವಿದ್ಯಾರ್ಥಿಗಳಾದ ಚಿನ್ಮಯಿ(96.67)(30757 ನೇ ರ‍್ಯಾಂಕ್), ಅವನೀಶ ಕೆ(95.22)(42988 ನೇ ರ‍್ಯಾಂಕ್), ಗಣೇಶಕೃಷ್ಣ ಬಿ(94.12)(52351 ನೇ ರ‍್ಯಾಂಕ್), ಶರಣ್ ಎಸ್. ಶೆಟ್ಟಿ(88.71) (28404 ನೇ ರ‍್ಯಾಂಕ್), ಪ್ರೀತಂ ಜಿ(88.58) (852 ನೇ ರ‍್ಯಾಂಕ್), ಶ್ರೀರಕ್ಷಾ ಬಿ(88.34) (102036 ನೇ ರ‍್ಯಾಂಕ್), ನವ್ಯಶ್ರೀ(85.09) (39147 ನೇ ರ‍್ಯಾಂಕ್) ಅಂಕ ಗಳಿಸಿ ಜೆಇಇ ಎಡ್ವಾನ್ಸ್ ಪರೀಕ್ಷೆಯನ್ನು ಬರೆಯಲು ಅರ್ಹತೆ ಗಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಾದ ಅಭಿರಾಮ್ ಯು(87.14), ಪ್ರತೀಕ ಗಣಪತಿ ಪಿ(85.28%) ಅಂಕ ಗಳಿಸಿದ್ದಾರೆ.

ಒಟ್ಟು ನಾಲ್ಕು ಬಾರಿ ಪರೀಕ್ಷೆ ಬರೆಯಲು ಎನ್ ಟಿ ಎ ಅವಕಾಶ ಮಾಡಿಕೊಟ್ಟಿದ್ದು ವಿದ್ಯಾರ್ಥಿಗಳು ಪ್ರತಿಹಂತದ ಪರೀಕ್ಷೆಯಲ್ಲೂ ಕೂಡ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಈ ಫಲಿತಾಂಶವು ಅತ್ಯಂತ ಆಶಾದಾಯಕವಾಗಿದ್ದು ಕಾಲೇಜಿನ ವಿದ್ಯಾರ್ಥಿಗಳು ನಿರಂತರ ವರ್ಷಗಳಲ್ಲಿ ಜೆ.ಇ.ಇ ಅರ್ಹತೆಯನ್ನು ಪಡೆಯುತ್ತಿದ್ದು ಪ್ರಸಕ್ತ ಸಾಲಿನಲ್ಲೂ ಈ ವಿದ್ಯಾರ್ಥಿಗಳು ಪ್ರಶಂಸನೀಯ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತುಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಎನ್‌ಟಿಎ ನಡೆಸಿದ ನಾಲ್ಕು ಹಂತಗಳ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಅತ್ಯುತ್ತಮ ಅಂಕಗಳನ್ನು ಪರಿಗಣಿಸಿ , ಈ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾದ ಜೆಇಇ ಮೈನ್ಸ್ ಪರೀಕ್ಷೆಗಳನ್ನು ದೇಶಾದ್ಯಂತ 9.34 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಆಯೋಜಿಸುವ ಜೆಇಇ ಪರೀಕ್ಷೆಯು ವೃತ್ತಿಪರ ಕೋರ್ಸುಗಳಿಗೆ ಸೇರುವ ವಿದ್ಯಾರ್ಥಿಗಳಲ್ಲಿ ಒತ್ತಡ ಕಡಿಮೆಮಾಡಲು ಹಾಗು ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಾಧನೆ ಮಾಡಲು ಬಯಸುವವರಿಗೆ ಈ ಪರೀಕ್ಷೆಗಳು ಸಹಕಾರಿಯಾಗಿವೆ. ಜೆ.ಇ.ಇ. ಪರೀಕ್ಷೆಗಳು ರಾಷ್ಟ್ರಮಟ್ಟದ ತಾಂತ್ರಿಕ ವಿದ್ಯಾಸಂಸ್ಥೆಗಳಿಗೆ ಪ್ರವೇಶವನ್ನು ಪಡೆಯಲು ಸಹಕಾರಿಯಾಗಿವೆ. ಐ.ಐ.ಟಿ. ಎನ್.ಐ.ಟಿ, ಐ.ಎಸ್.ಇ.ಆರ್. ಮುಂತಾದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಶುದ್ಧ ವಿಜ್ಞಾನವನ್ನೋ ಅಥವಾ ಅನ್ವಯ ವಿಜ್ಞಾನವನ್ನೋ ಅಧ್ಯಯನ ಮಾಡಲು ಜೆ.ಇ.ಇ. ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬೇಕಾಗುತ್ತದೆ.

driving
- Advertisement -

Related news

error: Content is protected !!