Friday, May 20, 2022
spot_imgspot_img
spot_imgspot_img

ಪುತ್ತೂರು: KSTRC ಮಜ್ದೂರ್ ಸಂಘ ದಿಂದ ಮುಂದುವರಿದ ಧರಣಿ; ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭ

- Advertisement -
- Advertisement -

ಪುತ್ತೂರು: ವೇತನ ಮತ್ತು ನಿವೃತ್ತಿ ನೌಕರರ ಸೇರಿದಂತೆ ಇತರ ಸೌಲಭ್ಯಗಳ ಬೇಡಿಕೆ ಮುಂದಿಟ್ಟು KSTRC ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ KSTRC ಮಜ್ದೂರ್ ಸಂಘದ ಸದಸ್ಯರು ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ನಡೆಸುತ್ತಿರುವ ಮೂರು ದಿನಗಳ ಧರಣಿ ಸತ್ಯಾಗ್ರಹಕ್ಕೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಅ.25ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ.

ಅಮರಣಾಂತ ಉಪವಾಸ ಸತ್ಯಾಗ್ರಹದ ಆರಂಭದ ದಿನದಲ್ಲಿ KSTRC ಮಜ್ದೂರ್ ಸಂಘದ ಸದಸ್ಯರಾದ ಸಂಸ್ಥೆಯ ಚಾಲಕರು, ನಿರ್ವಾಹಕರು, ನಿವೃತ ಸಿಬಂದಿ ಹಾಗೂ ತಾಂತ್ರಿಕ ಸಿಬಂದಿಗಳಾದ ಶಾಂತರಾಮ ವಿಟ್ಲ, ಸಂಜೀವ ಗೌಡ, ಮಹಾಬಲ ಗಡಿಮಾರ್, ಅಶೋಕ್ ಭಟ್, ರಾಮಕೃಷ್ಣ ಜಿ., ಶ್ರೀಧರ್ ಭೂಸಾರೆ, ವಾಸುದೇವ ಪ್ರಭು, ಜಗದೀಶ ಕುಂಬಾರ, ಸತ್ಯ ನಾರಾಯಣ ಡಿ., ದೇವಾನಂದ ವಿಟ್ಲ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಸತ್ಯಾಗ್ರಹ ಆರಂಭಕ್ಕೆ ಮುಂಚೆ KSTRC ಮಜ್ದೂರ್ ಸಂಘದ ಅಧ್ಯಕ್ಷರಾದ ನ್ಯಾಯವಾದಿ ಗಿರೀಶ್ ಮಳಿಯವರು ಅಮರ್ ಜವಾನ್ ಸ್ಮಾರಕ ಜ್ಯೋತಿಗೆ ಹಾರಾರ್ಪಣೆ ಮಾಡಿದರು. ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವ ನಾಥ್ ರೈ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷಾರ್ಚನೆಗೈದು ಉಪವಾಸ ಸತ್ಯಾಗ್ರಹವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಮಚಂದ್ರ ಅಡಪ, ವೆಂಕಟರಮಣ ಭಟ್, ಮಹಾಲಿಂಗೇಶ್ವರ ಭಟ್, ಸುನಿಲ್ ಮತ್ತಿ ತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!