Friday, June 27, 2025
spot_imgspot_img
spot_imgspot_img

ಪುತ್ತೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ; ಪ್ರಕರಣ ದಾಖಲು

- Advertisement -
- Advertisement -

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಅಪರಿಚಿತ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

18.07.2023 ರಂದು ಬೆಳಿಗ್ಗಿನ ಸಮಯಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರು ಮನೆಯಿಂದ ತಾವುಗಳು ವ್ಯಾಸಾಂಗ ಮಾಡುತ್ತಿರುವ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜಿಗೆ ಬರುತ್ತಿರುವಾಗ ದಾರಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಬಾಲಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಾಲಕಿಯರು ಆತನಿಂದ ತಪ್ಪಿಸಿಕೊಂಡು ಕಾಲೇಜಿಗೆ ಬಂದು ಘಟನೆಯ ಬಗ್ಗೆ ಕಾಲೇಜಿನ ಉಪನ್ಯಾಸಕಿಗೆ ತಿಳಿಸಿದ್ದಾರೆ.

ಸದ್ಯ ಉಪನ್ಯಾಸಕಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ: 341, 354(ಡಿ) ಐ.ಪಿ.ಸಿ ಕಲಂ: 8,12 ಪೊಕ್ಸೋ ಆಕ್ಟ್‌ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!