Tuesday, June 16, 2026
spot_imgspot_img
spot_imgspot_img

ಪುತ್ತೂರು: ಮಸೀದಿಯಲ್ಲಿ ವ್ಯಕ್ತಿಯೊಬ್ಬರಿಗೆ ಅಟ್ಟಾಡಿಸಿ ಹಲ್ಲೆ; ಘಟನೆಯ ವಿಡಿಯೋ ವೈರಲ್!

- Advertisement -
- Advertisement -

ಪುತ್ತೂರು : ಖಾಝಿ ನೇಮಕ ವಿಚಾರದಲ್ಲಿ ಆಕ್ಷೇಪ ಉಂಟಾಗಿ ಮಸೀದಿ ಜಮಾತ್ ಸಭೆಯಲ್ಲೇ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಘಟನೆ ವಿಡಿಯೋ ಎಲ್ಲೇಡೆ ವೈರಲ್ ಆಗಿದೆ.

ಪುತ್ತೂರಿನ ಬದ್ರಿಯಾ ಜುಮ್ಮಾ ಮಸೀದಿಯ ಮದ್ರಸದಲ್ಲಿ ಈ ಘಟನೆ ನಡೆದಿದೆ. ಖಾಝಿ ನೇಮಕ ವಿಚಾರದಲ್ಲಿ ನಡೆದ ಜಮಾತ್ ಕಮಿಟಿ ಸಭೆಯಲ್ಲಿ ಶೈಖುನಾ ಸಯ್ಯದುಲ್ ಉಲಮಾ ಜಿಫ್ರಿ ತಂಙಳ ಎಂಬವರನ್ನು ಪುತ್ತೂರು ತಾಲೂಕು ಸಂಯುಕ್ತ ಖಾಝಿಯಾಗಿ ನೇಮಿಸುವ ಕುರಿತಾಗಿ ಕೆಲವರು ಆಕ್ಷೇಪ ಎತ್ತಿದ್ದು, ಈ ವಿಚಾರವಾಗಿ ತಕರಾರು ನಡೆದಿದೆ ಎನ್ನಲಾಗಿದೆ.

ಮಸೀದಿ ಒಳಗೆ ಮತ್ತು ಹೊರಗಡೆ ತಳ್ಳಾಟ, ಹಲ್ಲೆ ನಡೆಸಿದ ದೃಶ್ಯಗಳು ಎಲ್ಲೇಡೆ ಹರಿದಾಡುತ್ತಿದೆ. ಸಾಲ್ಮರ ಶರೀಫ್ ಎಂಬವರು ಸಭೆಯಲ್ಲಿ ಆಕ್ಷೇಪ ಮಾಡಿದನ್ನು ನೆಪವಾಗಿಟ್ಟುಕೊಂಡು ಇತರ ಜಮಾತ್ ಸದಸ್ಯರು ಸೇರಿ ವಾಗ್ವಾದ ನಡೆಸಿದ್ದಾರೆ. ಬಳಿಕ ಶರೀಫ್ ಅವರನ್ನು ತಳ್ಳಿಕೊಂಡು ಹೊರಗೆ ಒಯ್ದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.

- Advertisement -

Related news

error: Content is protected !!