


ಪುತ್ತೂರು: ಪುತ್ತೂರು ಶಾಸಕ ಅಶೋಕ್ ರೈ ಅವರ ನೇತೃತ್ವದ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ದೀಪಾವಳಿ ಆಚರಣೆಯ ಬಗ್ಗೆ, ರೂಪುರೇಶೆಗಳ ಬಗ್ಗೆ, ಚರ್ಚಿಸುವ ಸಲುವಾಗಿ ಟ್ರಸ್ಟ್‌ನ ಪೂರ್ವಭಾವಿ ಸಭೆಯು ಜು. 10 ರಂದು ಶಾಸಕರ ಕಚೇರಿ ಸಭಾಭವನದಲ್ಲಿ ನಡೆಯಿತು.
ಟ್ರಸ್ಟ್ ಗೌರವ ಸಲಹೆಗಾರರಾದ ಸುಮಾ ಅಶೋಕ್ ರೈ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ದೀಪಾವಳಿ ಆಚರಣೆ ಈ ಬಾರಿ ಯಾವ ರೀತಿಯಲ್ಲಿ ಆಚರಿಸಬೇಕು ಎಂಬ ವಿಚಾರದಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿದ್ದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಅಕ್ಟೋಬರ್ ತಿಂಗಳಲ್ಲಿ ಕಾರ್ಯಕ್ರಮ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸುಮಾ ಅಶೋಕ್ ರೈ ಅವರು ಮಾತನಾಡಿ ಪ್ರತೀ ವರ್ಷದಂತೆ ಈ ಬಾರಿಯೂ ವಿಜೃಂಬಣೆಯಿಂದ ಆಚರಣೆ ಮಾಡಲಾಗುತ್ತದೆ ಶಾಸಕ ಅಶೋಕ್ ರೈ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಕಳೆದ ಬಾರಿ ಸುಮಾರು 65 ಸಾವಿರ ಮಂದಿ ಭಾಗವಹಿಸಿದ್ದು ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಜನರ ಜೊತೆಗೂಡಿ ಸಹಭೋಜನ ನಡೆಸುವ ಮೂಲಕ ದೀಪಾವಳಿ ಆಚರಣೆ ಮಾಡಲಿದ್ದೇವೆ ಎಂದು ಟ್ರಸ್ಟ್ ಗೌರವ ಸಕಹೆಗಾರರಾದ ಸುಮಾ ಅಶೋಕ್ ರೈ ತಿಳಿಸಿದ್ದಾರೆ.