Sunday, June 29, 2025
spot_imgspot_img
spot_imgspot_img

ಪುತ್ತೂರು: ದ್ವಿತೀಯ ಪ್ರದರ್ಶನದಲ್ಲಿ ಅದ್ದೂರಿಯಾಗಿ ಸದ್ದು ಮಾಡಿದ ಪುತ್ತೂರುದ ಪಿಲಿಗೊಬ್ಬು ಸೀಸನ್ 2

- Advertisement -
- Advertisement -

ಸ್ಯಾಂಡಲ್‌ವುಡ್‌ ನ ರೋರಿಂಗ್‌ ಸ್ಟಾರ್‌ ನಟ ಶ್ರೀಮುರಳಿ ಸೇರಿದಂತೆ ಹಲವು ಗಣ್ಯರು ಭಾಗಿ

ಪ್ರಥಮ ಸ್ಥಾನದೊಂದಿಗೆ ವಿಜೇತರಾಗಿ ಮಿಂಚಿದ ಮುಳಿಹಿತ್ಲು ಪ್ರೆಂಡ್‌ ಸರ್ಕಲ್ ಹುಲಿಗಳ ತಂಡ


ಪುತ್ತೂರು: ವಿಜಯಸಾಮ್ರಾಟ್ ನೇತೃತ್ವದ ಪುತ್ತೂರುದ ಪಿಲಿಗೊಬ್ಬು ಸಂಘಟನೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಸಾರಥ್ಯದಲ್ಲಿ ಪುತ್ತೂರುದ ಪಿಲಿಗೊಬ್ಬು ಸೀಸನ್ 2 ಕಾರ್ಯಕ್ರಮ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಗದ್ದೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

ಪ್ರಥಮ ಪ್ರದರ್ಶನದಲ್ಲೇ ಎಲ್ಲೆಡೆ ಸದ್ದು ಮಾಡಿದ ಪಿಲಿಗೊಬ್ಬು ಸೀಸನ್ 2 ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಸ್ಯಾಂಡಲ್‌ವುಡ್‌ ನ ರೋರಿಂಗ್‌ ಸ್ಟಾರ್‌ ನಟ ಶ್ರೀಮುರಳಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಗ್‌ ಬಾಸ್‌ ಸೀಸನ್‌ 10 ರ ವಿನ್ನರ್‌, ಕೋಸ್ಟಲ್‌ ವುಡ್‌ ಖ್ಯಾತ ನಟ ರೂಪೇಶ್‌ ಶೆಟ್ಟಿ, ಸೇರಿದಂತೆ ಹಲವು ಸಿನಿಮಾ ತಾರೆಯರು, ಧಾರ್ಮಿಕ ಮುಖಂಡರು, ಪಕ್ಷದ ನಾಯಕರು, ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.

ಪುತ್ತೂರುದ ಪಿಲಿಗೊಬ್ಬು ಸೀಸನ್ 2 ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಆಹಾರ ಮಳಿಗೆಗಳನ್ನೊಳಗೊಂಡ ಫುಡ್ ಫೆಸ್ಟ್‌ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿತ್ತು. ಫುಡ್ ಫೆಸ್ಟ್‌ ನಲ್ಲಿ ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ರುಚಿತ್ವ ಮತ್ತು ಶುಚಿತ್ವಗದೊಂದಿಗೆ ವಿಜೃಂಭಿಸಿದವು.
ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಸಭ್ಯತೆ, ಐಟಂ ಪ್ರಸ್ತುತಿ, ಸ್ಟಾಲ್‌ ಡಿಸೈನ್‌, ಜನಾಭಿಪ್ರಾಯಗಳನ್ನು ಪರಿಗಣಿಸಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಲ್ಲಾಳ್‌ ಕೆಯ್ಯೂರ್‌ ಇವರ ಪುಂಡಿ ಬಸಳೆ ಸ್ಟಾಲ್‌ 5,000 ನಗದಿನೊಂದಿಗೆ ಪ್ರಥಮ ಬಹುಮಾನವನ್ನು ಪೆಡೆದಿದ್ದಾರೆ. ಸಚಿನ್‌ ಉಪ್ಪಿನಂಗಡಿ ಮಾಲಕತ್ವದ ಫ್ಲೇವರ್‍ ಐಸ್ಕ್ರೀಮಂ 3000/- ನಗದಿನೊಂದಿಗೆ ದ್ವಿತೀಯ ಸ್ಥಾನ ಹಾಗೂ ಮಹಾಬಲ ನೇತೃತ್ವದ ಹಾಲಡ್ಕ ಕ್ರೀಮ್ ಜ್ಯೂಸ್ ಸ್ಟಾಲ್‌ 2000 ನಗದಿನೊಂದಿಗೆ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.

ಪುತ್ತೂರ್ದ ಪಿಲಿಗೊ‌ಬ್ಬು ಸೀಸನ್‌ – 2 ಸ್ಪರ್ಧೆಯಲ್ಲಿ ಎಂಟು ಹುಲಿಗಳ ತಂಡ ತಮ್ಮ ಉತ್ತಮ ಪ್ರದರ್ಶನದ ಮೂಲಕ ವೇದಿಕೆಯಲ್ಲಿ ಹೆಜ್ಜೆ ಹಾಕಿದ್ದರು. ಹುಲಿ ಕುಣಿತ ಸ್ಪರ್ಧೆಯಲ್ಲಿ ಹಲವು ವಿಭಾಗಗಳ ಪಂದ್ಯಶ್ರೇಷ್ಠ ಬಹುಮಾನವನ್ನು ನೀಡಿ ಗೌರವಿಸಲಾಯಿತು.

ವೈಯಕ್ತಿಕ ಪಂದ್ಯಶ್ರೇಷ್ಠ ವಿಜೇತರ ಪಟ್ಟಿ:

ಕಪ್ಪು ಹುಲಿ: ಟ್ಯಾಲೆಂಟ್‌ ಟೈಗರ್ಸ್ ತುಳುನಾಡು ಕೋಡಿಕಲ್‌ (ಅಕ್ಷತ್‌)
ಮರಿ ಹುಲಿ: ಮುಳಿಹಿತ್ಲು ಪ್ರೆಂಡ್‌ ಸರ್ಕಲ್ (ಶೌರ್ಯ)
ಮುಡಿ ಹೊಡೆದ ಪಿಲಿವೀರ: ಮುರಳಿ ಬ್ರದರ್ಸ್‌ ಟೈಗರ್ಸ್ ಟೀಮ್‌ ಪುತ್ತೂರು (ಧನುಷ್‌ ಕೈಕಂಬ)
ಅಪ್ಪೆ ಪಿಲಿ: ಸ್ವಾಮಿ ಕೊರಗಜ್ಜ ಭಕ್ತ ವೃಂದ ಕುಂಪಲ (ರಂಜಿತ್‌)
ಪಂದ್ಯ ಶ್ರೇಷ್ಠ ಪುತ್ತೂರ್ದ ಪಿಲಿ: ಕಲ್ಲೇಗ ಟೈಗರ್ಸ್ ರಿ. ಪುತ್ತೂರು (ಯತಿನ್‌ )
ನಾಣ್ಯ ತೆಗೆದ ಹುಲಿ ಪ್ರವೀಣ: ಮಂಗಳೂರು ಫ್ರೆಂಡ್ಸ್ ಟೈಗರ್ಸ್‌ (ಲಕೀಶ್‌)
ಉತ್ತಮ ಹಿಮ್ಮೇಳ ಬಳಗ: ಕಲ್ಲೇಗ ಟೈಗರ್ಸ್‌ (ರಿ) ಪುತ್ತೂರು
ಬಣ್ಣ, ಧರಣಿ ಮಂಡಲ, ಪ್ರವೇಶ ಹಾಗೂ ನಿರ್ಗಮನ: ಮುರಳಿ ಬ್ರದರ್ಸ್‌ ಟೈಗರ್ಸ್ ಟೀಮ್‌ ಪುತ್ತೂರು
ಶಿಸ್ತಿನ ತಂಡ : ಶ್ರೀ ದುರ್ಗಾ ಹುಲಿ ಮಂಜೇಶ್ವರ

ಪುತ್ತೂರ್ದ ಪಿಲಿಗೊ‌ಬ್ಬು ಸೀಸನ್‌ – 2 ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮುಳಿಹಿತ್ಲು ಪ್ರೆಂಡ್‌ ಸರ್ಕಲ್ ತಂಡ 3,00,000/- ನಗದುವಿನೊಂದಿಗೆ ಪ್ರಥಮ ಸ್ಥಾನ ಪಡೆದು ವಿಜೇತರಾಗಿ ಮಿಂಚಿದ್ದಾರೆ. ದ್ವಿತೀಯ ಸ್ಥಾನವನ್ನು ಸ್ವಾಮಿ ಕೊರಗಜ್ಜ ಭಕ್ತ ವೃಂದ ಕುಂಪಲ ತಂಡ 2 ಲಕ್ಷ ನಗದುವಿನೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದು ರನ್ನರ್ಸ್‌ ಆಗಿ ಮಿಂಚಿದ್ದಾರೆ. ಹಾಗೂ ಮಹಾಕಾಳಿ ಟೈಗರ್ಸ್‌ ತುಮಿನಾಡು 1 ಲಕ್ಷ ನಗದುವಿನೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

- Advertisement -

Related news

error: Content is protected !!