Sunday, June 14, 2026
spot_imgspot_img
spot_imgspot_img

ಪುತ್ತೂರು: ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿ ನಾಪತ್ತೆ..!

- Advertisement -
- Advertisement -

ಪುತ್ತೂರು: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿ ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿ ಶೇಷಪ್ಪ ಗೌಡ (62) ಎಂದು ಗುರುತಿಸಲಾಗಿದೆ.

ಮಾನಸಿಕವಾಗಿ ಆರೋಗ್ಯದಲ್ಲಿ ಏರುಪೇರಾಗಿದ್ದ ಶೇಷಪ್ಪ ಗೌಡ ಅವರನ್ನು ಫೆ.7ರಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ವೇಳೆ ಅವರು ಆಸ್ಪತ್ರೆಯಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಮನೆ ಮಂದಿ ಆಸ್ಪತ್ರೆ ವಠಾರ ಸಹಿತ ಪುತ್ತೂರು ನಗರ ಪ್ರದೇಶದಲ್ಲಿ ಫೆ.8ಮತ್ತು 9ರಂದು ಹುಡುಕಾಡಿದ್ದಾರೆ. ಆದರೆ ಶೇಷಪ್ಪ ಗೌಡ ಪತ್ತೆಯಾಗಿರಲಿಲ್ಲ. ಈ ಕುರಿತು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಮೋ :(9440884782 , 8496998125) ದೂರವಾಣಿ ಸಂಖ್ಯೆಗೆ ಕರೆ ಮಾಡಲು ವಿನಂತಿಸಿದ್ದಾರೆ.

- Advertisement -

Related news

error: Content is protected !!