Monday, February 10, 2025
spot_imgspot_img
spot_imgspot_img

ಪುತ್ತೂರು: ಯುವಕ ನಾಪತ್ತೆ; ಪ್ರಕರಣ ದಾಖಲು..!

- Advertisement -
- Advertisement -

ಪುತ್ತೂರು: ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಡಿ.1ರಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವಕನನ್ನು ಮೂಲತಃ ರಾಜಸ್ಥಾನ ನಿವಾಸಿಯಾಗಿದ್ದು ಪ್ರಸ್ತುತ ಪರ್ಲಡ್ಕದಲ್ಲಿ ವಾಸ್ತವ್ಯವಿರುವ ರತನ್ ಸಿಂಗ್‌ರವರ ಪುತ್ರ ಲೋಕೇಂದರ್ ಸಿಂಗ್(22) ಎಂದು ಗುರುತಿಸಲಾಗಿದೆ.

ಬಿಬಿಎ ಪದವಿ ಪಡೆದಿರುವ ಲೋಕೇಂದರ್ ಸಿಂಗ್ ಕಳೆದ ಎರಡು ತಿಂಗಳ ಹಿಂದೆ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದ. ನ.30ರಂದು ಎಂದಿನಂತೆ ಮನೆಯಲ್ಲಿ ಊಟ ಮಾಡಿ ಟಿವಿ ನೋಡಿಕೊಂಡಿದ್ದ. ಬೆಳಿಗ್ಗೆ ನೋಡುವಾಗ ಆತ ಮನೆಯಲ್ಲಿಲ್ಲದೆ ನಾಪತ್ತೆಯಾಗಿದ್ದಾನೆ. ಆತನ ಉಡುಪುಗಳು ತುಂಬಿದ್ದ ಬ್ಯಾಗ್, ದಾಖಲೆ ಪತ್ರಗಳು ಹಾಗೂ ಪಾಸ್‌ಪೋರ್ಟ್ ಸಹಿತ ಆತ ನಾಪತ್ತೆಯಾಗಿದ್ದಾನೆ.

ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಲೋಕೇಂದರ್ ಸಿಂಗ್ ತಂದೆ ರತನ್ ಸಿಂಗ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ಗುರುತು ಪತ್ತೆಯಾದಲ್ಲಿ ನಗರ ಠಾಣೆಗೆ ಮಾಹಿತಿ ನೀಡುಂತೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.

- Advertisement -

Related news

error: Content is protected !!