Tuesday, December 3, 2024
spot_imgspot_img
spot_imgspot_img

ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ; FIR ದಾಖಲು!

- Advertisement -
- Advertisement -

ಪುತ್ತೂರು: ವ್ಯಕ್ತಿಯೋರ್ವರು ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಂಬೇಡ್ಕರ್ ಅಪತ್ ಬಾಂಧವ ಟ್ರಸ್ಟ್ ನ ಅಧ್ಯಕ್ಷ ರಾಜು ಹೊಸ್ಮಠ ಎಂದು ತಿಳಿದುಬಂದಿದೆ.

ಹಾರಾಡಿಯ ನೊಂದ ಬಾಲಕಿಗೆ ಇಲ್ಲಿನ ಎಮ್.ಟಿ.ರಸ್ತೆಯ ಬಳಿಯ ಕಟ್ಟಡವೊಂದರಲ್ಲಿ ರಾಜು ಹೊಸ್ಮಠ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ನೊಂದ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪೊಷಕರು ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆಯ ವಿವರ:
2019 ರಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿ ರಾಜು ಹೊಸ್ಮಠರವರ ಕಚೇರಿಗೆ ತಂದೆಯೊಂದಿಗೆ ತೆರಳಿದ್ದು , ಈ ವೇಳೆ ರಾಜುರವರ ಪರಿಚಯವಾಗಿದೆ. ಬಳಿಕ ಮತ್ತೊಂದು ದಿನ ರಾಜುರವರ ಕಚೇರಿಯಲ್ಲಿ ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಂಗಿಯನ್ನು ಅವರ ತಂದೆ ಬಿಟ್ಟು ಹೋಗಿದ್ದು , ಆ ವೇಳೆ ರಾಜು ಅಪ್ರಾಪ್ತ ಬಾಲಕಿಯ ತಂಗಿಯನ್ನು ಮತ್ತು ಇನ್ನೊಂದು ಬಾಲಕಿಯನ್ನು ತಿಂಡಿ ತರುವ ನೆಪವೊಡ್ಡಿ ಅವರನ್ನು ಹೊರಗಡೆ ಕಳಿಸಿದ್ದಾನೆ.

ಈ ಸಂದರ್ಭ ರಾಜು ಹೊಸ್ಮಠ ಆಕೆಯನ್ನು ತನ್ನ ಬಳಿ ಕರೆದು ನಾನು ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಅಪ್ರಾಪ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!